ಶಿವಮೊಗ್ಗ-ಯಶವಂತಪುರ ಹೊಸ ರೈಲು; ವೇಳಾಪಟ್ಟಿ

ಶಿವಮೊಗ್ಗ, ಜನವರಿ 22 : ನೈಋತ್ಯ ರೈಲ್ವೆ ಶಿವಮೊಗ್ಗ-ಬೆಂಗಳೂರು ನಡುವೆ ಹೊಸ ರೈಲನ್ನು ಘೋಷಣೆ ಮಾಡಿದೆ. ತತ್ಕಾಲ್ ಎಕ್ಸ್‌ಪ್ರೆಸ್ ರೈಲು ಜನವರಿ 24 ರಿಂದ 31.03.2020ರ ತನಕ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ಶಿವಮೊಗ್ಗದ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಜನವರಿ 23ರಂದು ಮಧ್ಯಾಹ್ನ 3ಗಂಟೆಗೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ವಾರದಲ್ಲಿ 4 ದಿನಗಳ ಕಾಲ ಈ ರೈಲು ಸಂಚಾರ ನಡೆಸಲಿದೆ.

ಶಿವಮೊಗ್ಗ ಟೌನ್-ಯಶವಂತಪುರ ನಡುವೆ ರೈಲು ಸಂಖ್ಯೆ 06539/06540 ತತ್ಕಾಲ್ ಎಕ್ಸ್‌ಪ್ರೆಸ್ ರೈಲು ಜನವರಿ 24ರಿಂದ 31/3/2020ರ ತನಕ ಸಂಚಾರ ನಡೆಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಹೊಸ ರೈಲು ಸೇವೆ ಆರಂಭವಾಗುತ್ತಿರುವ ಕಾರಣ ಯಶವಂತಪುರ-ಶಿವಮೊಗ್ಗ ಇಂಟರ್‌ಸಿಟಿ ರೈಲು ಇನ್ನು ಮುಂದೆ ವಾರದ 7 ದಿನಗಳ ಕಾಲವೂ ಸಂಚಾರ ನಡೆಸಲಿದೆ ಎಂದು ಬಿ. ವೈ. ರಾಘವೇಂದ್ರ ಹೇಳಿದ್ದಾರೆ. ಹೊಸ ರೈಲಿನ ವೇಳಾಪಟ್ಟಿ, ನಿಲ್ದಾಣಗಳ ವಿವರ ಇಲ್ಲಿದೆ.

ರೈಲಿನ ವೇಳಾಪಟ್ಟಿ

ರೈಲಿನ ವೇಳಾಪಟ್ಟಿ

ಶಿವಮೊಗ್ಗ ಟೌನ್-ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್ ರೈಲು ಜನವರಿ 24ರಿಂದ ಸಂಚಾರ ನಡೆಸಲಿದೆ. ಬೆಳಗ್ಗೆ 9ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು ಮಧ್ಯಾಹ್ನ 2.45ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ.ಶಿವಮೊಗ್ಗದಿಂದ ಮಧ್ಯಾಹ್ನ 3.30ಕ್ಕೆ ಹೊರಡುವ ರೈಲು ರಾತ್ರಿ 9ಗಂಟೆಗೆ ಯಶವಂತಪುರ ತಲುಪಲಿದೆ.

ವಾರದಲ್ಲಿ 4 ದಿನ ಸಂಚಾರ

ವಾರದಲ್ಲಿ 4 ದಿನ ಸಂಚಾರ

ಶಿವಮೊಗ್ಗ-ಯಶವಂತಪುರ ನಡುವಿನ ರೈಲು ವಾರದಲ್ಲಿ 4 ದಿನ ಸಂಚಾರ ನಡೆಸಲಿದೆ. ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ರೈಲು ಸಂಖ್ಯೆ 06539/06540 ತತ್ಕಾಲ್ ಎಕ್ಸ್‌ಪ್ರೆಸ್ ರೈಲು ಜನವರಿ 24ರಿಂದ 31/3/2020ರ ತನಕ ಸಂಚಾರ ನಡೆಸಲಿದೆ.

ನಿಲ್ದಾಣಗಳ ವಿವರ

ನಿಲ್ದಾಣಗಳ ವಿವರ

ಶಿವಮೊಗ್ಗ-ಯಶವಂತಪುರ ತತ್ಕಾಲ್ ವಿಶೇಷ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿಯಲ್ಲಿ ನಿಲುಗಡೆಗೊಳ್ಳಲಿದೆ.

ರೈಲಿನ ವಿವರ

ರೈಲಿನ ವಿವರ

ವಾರದಲ್ಲಿ ನಾಲ್ಕು ದಿನ ಸಂಚಾರ ನಡೆಸುವ ತತ್ಕಾಲ್ ವಿಶೇಷ ರೈಲಿನಲ್ಲಿ 1 ಎಸಿ ಚೇರ್ ಕಾರ್, 11 ಚೇರ್ ಕಾರ್, 1 ಸೆಕೆಂಡ್ ಕ್ಲಾಸ್ ಕೋಚ್, 1 ಲಗೇಜ್ ವ್ಯಾನ್ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+