ಟ್ರೋಲ್ ಆದ ಈ ಪುಟ್ಟ ಹುಡುಗನ ಫೋಟೊ ಕಥೆ

ಶಿವಮೊಗ್ಗ, ನವೆಂಬರ್ 11: ನವೆಂಬರ್ 1ರಂದು ಮಕ್ಕಳು, ಶಾಲಾ ಶಿಕ್ಷಕರು ಎಲ್ಲರೂ ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲಿ ಮಗ್ನರಾಗಿದ್ದರು. ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಧ್ವಜಾರೋಹಣ ಮುಗಿಸಿ ಶಾಲಾ ಮಕ್ಕಳ ನೃತ್ಯವನ್ನು ನೋಡುತ್ತಿದ್ದರು. ಈ ಸಂದರ್ಭದಲ್ಲೇ ಧ್ವಜದ ಕಟ್ಟೆ ಹತ್ತಿ ಖಾಸಗಿ ಶಾಲಾ ವಿದ್ಯಾರ್ಥಿಗಳು ನೃತ್ಯ ಮಾಡುತ್ತಿದ್ದುದನ್ನು ಗಾಂಭೀರ್ಯದಿಂದ ನೋಡುತ್ತಾ ನಿಂತಿದ್ದ ಒಬ್ಬ ಹುಡುಗ.

ಈ ಪುಟ್ಟ ಹುಡುಗನ ವಿಡಿಯೋ ಮತ್ತು ಚಿತ್ರ ತುಂಬಾ ಟ್ರೋಲ್ ಆಗಿತ್ತು. ಗತ್ತಿನಿಂದ ನೋಡುತ್ತಾ ನಿಂತಿದ್ದ ಈ ಹುಡುಗನ ಚಿತ್ರ ಸಾವಿರಾರು ಜನರಿಂದ ಮೆಚ್ಚುಗೆ ಪಡೆದಿತ್ತು. ಕನ್ನಡ ಸರ್ಕಾರಿ ಶಾಲೆಗಳ ಮಕ್ಕಳ ಧೈರ್ಯವನ್ನು ಕೊಂಡಾಡುತ್ತಾ ಹಲವು ಕಮೆಂಟ್ ಗಳೂ ಈ ಫೋಟೊಗೆ ಬಂದಿದ್ದವು. ರಾಜಾರೋಷವಾಗಿ ಧ್ವಜದ ಕಟ್ಟೆ ಹತ್ತಿ ನೃತ್ಯವನ್ನು ನೋಡುತ್ತಾ ನಿಂತಿದ್ದ ಈ ಪುಟ್ಟ ಹುಡುಗನಿಗೆ, ಅವನ ಧೈರ್ಯಕ್ಕೆ, ಆ ಮುಗ್ಧತೆಗೆ ಎಷ್ಟೋ ಮಂದಿ ಮನಸೋತಿದ್ದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನಕುಮಾರ್ ಹಾಗೂ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಇದ್ದರು.

Shivamogga Student Watching Dance Photo Trolled In Facebook

ಆದರೂ ಈ ಹುಡುಗ ತನ್ನಷ್ಟಕ್ಕೆ ತಾನು ನೃತ್ಯವನ್ನು ನೋಡುತ್ತಾ ನಿಂತಿದ್ದ. ಎಎನ್ಐ ಸುದ್ದಿ ಸಂಸ್ಥೆಯ ವರದಿಗಾರ ಉದಯ್ ಸಾಗರ್ ಈ ವೀಡಿಯೋ ಮಾಡಿದ್ದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+