ರೈಲ್ವೆ ಇಲಾಖೆಯಿಂದ ಶಿವಮೊಗ್ಗಕ್ಕೆ ಮತ್ತೊಂದು ಕೊಡುಗೆ

ಶಿವಮೊಗ್ಗ, ಜನವರಿ 03 : ಹೊಸ ವರ್ಷದ ಆರಂಭದಲ್ಲಿ ಶಿವಮೊಗ್ಗಕ್ಕೆ ರೈಲ್ವೆ ಇಲಾಖೆ ಕೊಡುಗೆಯೊಂದನ್ನು ನೀಡಿದೆ. ಶಿವಮೊಗ್ಗ ಟೌನ್-ರೇಣಿಗುಂಟ ರೈಲು ಸೇವೆಯನ್ನು ವಾರದ 2 ದಿನಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ವಾರಕ್ಕೊಮ್ಮೆ ಸಂಚಾರ ನಡೆಸುತ್ತಿದ್ದ ಶಿವಮೊಗ್ಗ ಟೌನ್-ರೇಣಿಗುಂಟ- ಶಿವಮೊಗ್ಗ ಟೌನ್ ರೈಲನ್ನು ವಾರದ ಎರಡು ದಿನಕ್ಕೆ ವಿಸ್ತರಿಸಲಾಗಿದೆ. ಜನವರಿ 9ರಿಂದ ಪರಿಷ್ಕೃತ ಆದೇಶ ಜಾರಿಗೆ ಬರಲಿದೆ.

ರೈಲು ಸಂಖ್ಯೆ 06223/06224 ಈಗಿರುವ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ವಾರದ ಎರಡು ದಿನ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಆದೇಶದಲ್ಲಿ ತಿಳಿಸಿದೆ. ಬುಧವಾರ ಮತ್ತು ಗುರುವಾರ ರೈಲು ಸಂಚಾರ ನಡೆಸಲಿದೆ.

Shivamogga Renigunta Tatkal Express Now Bi Weekly

2019ರ ನವೆಂಬರ್‌ನಲ್ಲಿ ಶಿವಮೊಗ್ಗ ಟೌನ್-ರೇಣಿಗುಂಟ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಬುಧವಾರ ಮಾತ್ರ ರೈಲು ಸಂಚಾರ ನಡೆಸುತ್ತಿತ್ತು, ಈಗ ಅದನ್ನು ವಾರದ ಎರಡು ದಿನಕ್ಕೆ ವಿಸ್ತರಣೆ ಮಾಡಲಾಗಿದೆ.

ವೇಳಾಪಟ್ಟಿ : ಪ್ರತಿ ಬುಧವಾರ ಮತ್ತು ಗುರುವಾರ ಬೆಳಗ್ಗೆ 6.15ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ತಿರುಪತಿ ಸಮೀಪದ ರೇಣಿಗುಂಟವನ್ನು ರಾತ್ರಿ 8.05ಕ್ಕೆ ತಲುಪಲಿದೆ. ರೇಣಿಗುಂಟದಿಂದ ರಾತ್ರಿ 9.45ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 11.45ಕ್ಕೆ ಶಿವಮೊಗ್ಗ ತಲುಪಲಿದೆ.

ಶಿವಮೊಗ್ಗ ಟೌನ್-ರೇಣಿಗುಂಟ ರೈಲಿನಲ್ಲಿ 1 ಎಸಿ 2 ಟೈರ್, 1 ಎಸಿ 3 ಟೈರ್ ಕೋಚ್ ಹೊಂದಿದೆ. 7 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, 3 ಸೆಕೆಂಡ್ ಕ್ಲಾಸ್ ಸಾಮಾನ್ಯ ಬೋಗಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+