ಶಿವಮೊಗ್ಗದಲ್ಲಿ ರೂ.26000 ಮೌಲ್ಯದ ಖೋಟಾ ನೋಟು ವಶ, ಇಬ್ಬರ ಬಂಧನ
ಶಿವಮೊಗ್ಗ, ಫೆಬ್ರವರಿ 08: ಖೊಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದು 26000 ಮೌಲ್ಯದ ಖೊಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ DCIB ಪೋಲೀಸರ ಕಾರ್ಯಾಚರಣೆ ನಡೆಸಿ ಖೊಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಅಮ್ಜದ್ ಪಾಷಾ ಮತ್ತು ಮೋಹ್ಸಿನ್ ಖಾನ್ ಅವರುಗಳನ್ನು ಬಂಧಿಸಿದ್ದಾರೆ.
ಇಂದು ಮದ್ಯಾಹ್ನ 3 ಗಂಟೆಗೆ ತುಂಗಾನಗರ ಠಾಣಾ ವ್ಯಾಪ್ತಿಯ ಗೋಪಾಳ ಪೋಲೀಸ್ ಚೌಕಿ ಬಳಿ ದಾಳಿ KA-14/ED-8326 ಬಜಾಜ್ ಬೈಕ್ ನಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬೆನ್ನತ್ತಿ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಬಳಿ LEN875002 ಸಂಖ್ಯೆಯ 16 ನೋಟುಗಳು, LEN875022 ಸಂಖ್ಯೆಯ 09 ನೋಟುಗಳು , LEN875042 ಸಂಖ್ಯೆಯ 11 ನೋಟುಗಳು ,LEN875040 ಸಂಖ್ಯೆಯ 16 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಅಸಲಿ 500 ರ ನೋಟಿನ ಬಂಡಲ್‌ನೊಂದಿಗೆ ಖೊಟಾ ನೋಟಗಳನ್ನಿಟ್ಟು ಚಲಾವಣೆ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 10000 ಮೌಲ್ಯದ ಅಸಲಿ ನೋಟುಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಭದ್ರಾವತಿಯ ತೌಸೀಫ್ ಹಾಗೂ ಬೆಂಗಳೂರಿನ ಇರ್ಫಾನ್ ಎಂಬುವರೊಂದಿಗೆ ಸೇರಿ 70 ಸಾವಿರ ಹಣ ನೀಡಿ ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬನಿಂದ 2 ಲಕ್ಷ ಮೌಲ್ಯದ ಖೋಟಾನೋಟುಗಳನ್ನು ತಂದು ಚಲಾವಣೆ ಮಾಡಿದುದಾಗಿ ಒಪ್ಪಿಕೊಂಡಿದ್ದಾರೆ.











Click it and Unblock the Notifications