ಶಿವಮೊಗ್ಗ ಉಪ ಚುನಾವಣೆ : ಫಲಿತಾಂಶ ಅಂತಿಮ, ಯಾರಿಗೆ ಎಷ್ಟು ಮತ?
ಶಿವಮೊಗ್ಗ, ನವೆಂಬರ್ 06 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಶಿವಮೊಗ್ಗ ಕ್ಷೇತ್ರ ಪುನಃ ಬಿಜೆಪಿ ಪಾಲಾಗಿದೆ.
ಮಂಗಳವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಡೆಯಿತು. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು 52148 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಜೆಡಿಎಸ್‌ನ ಮಧು ಬಂಗಾರಪ್ಪ ಅವರು 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಬಿ.ವೈ.ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದರು. ಮಧು ಬಂಗಾರಪ್ಪ ಅವರು 4,91,158 ಮತಗಳನ್ನು ಪಡೆದು ಸೋಲು ಅನುಭವಿಸಿದರು. 52148 ಮತಗಳ ಅಂತರದಿಂದ ರಾಘವೇಂದ್ರ ಅವರು ಗೆಲುವು ಸಾಧಿಸಿದರು.

ಚುನಾವಣಾ ಕಣದಲ್ಲಿ ಬಿ.ವೈ.ರಾಘವೇಂದ್ರ (ಬಿಜೆಪಿ), ಮಧು ಬಂಗಾರಪ್ಪ (ಜೆಡಿಎಸ್), ಮಹಿಮಾ ಪಟೇಲ್ (ಜೆಡಿಯು), ಬಿ.ಕೆ.ಶಶಿಕುಮಾರ್ (ಪಕ್ಷೇತರ) ಇದ್ದರು. 10687 ನೋಟಾ ಮತಗಳು ಚಲಾವಣೆಯಾಗಿವೆ.
ಯಾರಿಗೆ ಎಷ್ಟು ಮತಗಳು
* ಬಿ.ವೈ.ರಾಘವೇಂದ್ರ 5,43,306
* ಮಧು ಬಂಗಾರಪ್ಪ 4,91,158
* ಮಹಿಮಾ ಪಟೇಲ್ 8,713
* ಬಿ.ಕೆ.ಶಶಿಕುಮಾರ್ 17189
* ನೋಟಾ 10687












Click it and Unblock the Notifications