ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದರೂ 600 ಅಂಕ ಪಡೆದ ಶಿವಮೊಗ್ಗದ ನಂದಿನಿ

ಶಿವಮೊಗ್ಗ ಮೇ 3: ಶಾಲಾ ಪ್ರವಾಸದ ಅಪಘಾತದಲ್ಲಿ ತನ್ನ ಬಲಗೈ ಕಳೆದುಕೊಂಡ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ.

ಶಿವಮೊಗ್ಗ ನಗರದ ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಬಿ. ಎಸ್ ನಂದಿನಿ ಡಿಸೆಂಬರ್ ನಲ್ಲಿ ಶಾಲಾ ಪ್ರವಾಸಕ್ಕೆ ಹೋಗಿದ್ದಾಗ ಬಸ್ ಅಪಘಾತಕ್ಕೀಡಾಗಿ ತನ್ನ ಒಂದು ಕೈ ಕಳೆದುಕೊಂಡಿದ್ದರು. ಆದರೂ ಛಲ ಬಿಡದೆ ಕಠಿಣ ಪರಿಶ್ರಮದಿಂದ ಓದುವ ಮೂಲಕ 625ಕ್ಕೆ 600 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾಳೆ.

ಅಪಘಾತದ ವೇಳೆಯಲ್ಲಿ ನಂದಿನಿ ಬಲಗೈ ಕಳೆದುಕೊಂಡಿದ್ದಳು. ನಂತರ ಮೂರು ತಿಂಗಳು ಮನೆಯಲ್ಲೇ ಬೆಡ್ ರೆಸ್ಟ್ ಪಡೆದು ಚೇತರಿಸಿಕೊಂಡಿದ್ದಳು. ಬಳಿಕ ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಓದಿ ಇನ್ನೊಬ್ಬರ ಸಹಾಯದಿಂದ ಪರೀಕ್ಷೆ ಎದುರಿಸಿ ಸಾಧನೆ ಮಾಡಿದ್ದಾಳೆ.

Shivamogga girl Nandini got 96 % marks in SSLC exam

ಕಳೆದ ಡಿಸೆಂಬರ್ ನಲ್ಲಿ ಶಾಲಾ ಪ್ರವಾಸಕ್ಕೆ ಉಡುಪಿ ಸಮೀಪದ ಸೇಂಟ್ ಮೆರೀಸ್ ದ್ವೀಪ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳಿಗೆ ತೆರಳುತ್ತಿದ್ದಾಗ ಬಸ್ ಚಿಕ್ಕಮಗಳೂರು ಎನ್.ಆರ್. ಪುರ ಸಮೀಪ ಅಪಘಾತವಾಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದ. ಘಟನೆಯಲ್ಲಿ ಒಂಬತ್ತು ಮಂದಿ ಗಂಭೀರ ಗಾಯಗೊಂಡಿದ್ದರು. ಅವರಲ್ಲಿ ಒಬ್ಬಳು ನಂದಿನಿಯಾಗಿದ್ದು ಈಕೆ ಬಲಗೈ ಹಾನಿಯಾಗಿತ್ತು. ಆದರೂ ಎದೆಗುಂದದ ಆಕೆ ತನ್ನ ಪರಿಶ್ರಮದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 96% ಅಂಕ ಗಳಿಸಿದ್ದಾರೆ.

"ಬಲಗೈ ಇಲ್ಲದಿದ್ದರೂ ನಾನು ನನ್ನ ಅಧ್ಯಯನ ಮುಂದುವರಿಸಲು ತೀರ್ಮಾನಿಸಿದೆ.ಅದರಂತೆ ಎಲ್ಲಾ ವಿಷಯಗಳ ಪ್ರಮುಖ ಭಾಗಗಳ ಅಧ್ಯಯನ ಮುಂದುವರಿಸಿದೆ.ನನ್ನ ಕಷ್ಟದ ಸಮಯದಲ್ಲಿ ನನ್ನ ಸಹಪಾಠಿಗಳು, ಶಿಕ್ಷಕರು ಮತ್ತು ಕುಟುಂಬದ ಸದಸ್ಯರು ಬೆಂಬಲಕ್ಕೆ ನಿಂತರು" ಎನ್ನುತ್ತಾಳೆ ನಂದಿನಿ.

Shivamogga girl Nandini got 96 % marks in SSLC exam

ಇನ್ನು ತಮ್ಮ ಮಗಳ ಸಾಧನೆಯ ಬಗ್ಗೆ ಪೋಷಕರು ಹಾಗೂ ಶಿಕ್ಷಕರಾದ ಸೋಮನಾಥ್ ಹಾಗೂ ನಿರ್ಮಲಾ ದಂಪತಿ ಪ್ರಶಂಸಿಸುತ್ತಿದ್ದು, ಇತ್ತ ನೋವಿನಲ್ಲೂ ಕಡಿಮೆ ಅವಧಿಯಲ್ಲಿಯೇ ನಂದಿನಿ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+