ಶಿವಮೊಗ್ಗದಲ್ಲಿ ಕಳೆದ 24 ಗಂಟೆಗಳ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಶಿವಮೊಗ್ಗ, ಸೆಪ್ಟೆಂಬರ್ 20: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 15.30 ಮಿ.ಮೀ ಮಳೆಯಾಗಿದ್ದು, ಸರಾಸರಿ 2.19 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.
ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ ಇದ್ದು, ಇದುವರೆಗೆ ಸರಾಸರಿ 238.97 ಮಿ.ಮೀ ಮಳೆ ಸುರಿದಿದೆ.
ಶಿವಮೊಗ್ಗ ತಾಲ್ಲೂಕಿನಲ್ಲಿ 0.00 ಮಿ.ಮೀ, ಭದ್ರಾವತಿ ತಾಲ್ಲೂಕಿನಲ್ಲಿ 2.20 ಮಿ.ಮೀ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ 3.80 ಮಿ.ಮೀ, ಸಾಗರ ತಾಲ್ಲೂಕಿನಲ್ಲಿ 3.20 ಮಿ.ಮೀ, ಶಿಕಾರಿಪುರ ತಾಲ್ಲೂಕಿನಲ್ಲಿ 0.00 ಮಿ.ಮೀ, ಸೊರಬ ತಾಲ್ಲೂಕಿನಲ್ಲಿ 1.30 ಮಿ.ಮೀ ಹಾಗೂ ಹೊಸನಗರ ತಾಲ್ಲೂಕಿನಲ್ಲಿ 4.80 ಮಿ.ಮೀ ಮಳೆಯಾಗಿದೆ.

ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಹಾಗೂ ಅಲ್ಲಲ್ಲಿ ಅಧಿಕ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ ಗಳಲ್ಲಿ ಈ ಕೆಳಕಂಡಂತಿದೆ.
ಲಿಂಗನಮಕ್ಕಿ ಜಲಾಶಯ: 1819 (ಗರಿಷ್ಠ), 1810.05 (ಇಂದಿನ ಮಟ್ಟ),
8379.00 ಕ್ಯೂಸೆಕ್ಸ್ (ಒಳಹರಿವು), 3921.76 ಕ್ಯೂಸೆಕ್ಸ್ (ಹೊರಹರಿವು)
ಭದ್ರಾ ಜಲಾಶಯ: 186 (ಗರಿಷ್ಠ), 185.80 (ಇಂದಿನ ಮಟ್ಟ),
5668.00 ಕ್ಯೂಸೆಕ್ಸ್ (ಒಳಹರಿವು), 3750.00 ಕ್ಯೂಸೆಕ್ಸ್ (ಹೊರಹರಿವು).
ತುಂಗಾ ಜಲಾಶಯ: 588.24 (ಗರಿಷ್ಠ), 588.24 (ಇಂದಿನ ಮಟ್ಟ),
10981.00 ಕ್ಯೂಸೆಕ್ಸ್ (ಒಳಹರಿವು), 10981.00 ಕ್ಯೂಸೆಕ್ಸ್ (ಹೊರಹರಿವು).
ಮಾಣಿ ಜಲಾಶಯ: 595 (ಎಂ.ಎಸ್.ಎಲ್ ಗಳಲ್ಲಿ), 587.20 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ),
1724 ಕ್ಯೂಸೆಕ್ಸ್ (ಒಳಹರಿವು), 0.00 ಕ್ಯೂಸೆಕ್ಸ್ (ಹೊರಹರಿವು).
ಪಿಕ್ ಅಪ್ ಜಲಾಶಯ: 563.88 (ಎಂ.ಎಸ್.ಎಲ್ ಗಳಲ್ಲಿ), 562.42 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ),
608 ಕ್ಯೂಸೆಕ್ಸ್ (ಒಳಹರಿವು), 0.00 ಕ್ಯೂಸೆಕ್ಸ್(ಹೊರಹರಿವು).
ಚಕ್ರ ಜಲಾಶಯ: 580.57 (ಎಂ.ಎಸ್.ಎಲ್ ಗಳಲ್ಲಿ), 571.32 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ),
408.00 ಕ್ಯೂಸೆಕ್ಸ್ (ಒಳಹರಿವು), 691 ಕ್ಯೂಸೆಕ್ಸ್ (ಹೊರಹರಿವು)
ಸಾವೆಹಕ್ಲು ಜಲಾಶಯ: 583.70 (ಗರಿಷ್ಠ ಎಂ.ಎಸ್.ಎಲ್ ಗಳಲ್ಲಿ), 574.94 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ),
614.00 ಕ್ಯೂಸೆಕ್ಸ್ (ಒಳಹರಿವು), 765.00 ಕ್ಯೂಸೆಕ್ಸ್ (ಹೊರಹರಿವು).












Click it and Unblock the Notifications