Shivamogga Rape case: ಅತ್ಯಾಚಾರ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಬಿಜೆಪಿ ಮುಖಂಡ ಅರೆಸ್ಟ್

ಶಿವಮೊಗ್ಗ ಆಗಸ್ಟ್ 6: ಅತ್ಯಾಚಾರ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಬಿಜೆಪಿ ಮುಖಂಡನನ್ನು ಬಿಜಾಪುರದಲ್ಲಿ ಬಂಧಿಸಲಾಗಿದೆ. ಬಿಜೆಪಿಯ ಸೋಶಿಯಲ್ ಮಿಡಿಯಾ ಜಿಲ್ಲಾ ಸಂಚಾಲಕ ಶರತ್ ಕಲ್ಯಾಣಿ ಅವರ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಸದ್ಯ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.

ಶರತ್ ಕಲ್ಯಾಣಿ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈತನ ಮೇಲೆ 42 ವರ್ಷದ ವಿಚ್ಚೇದಿತ ಮಹಿಳೆಯನ್ನು ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದ ಎನ್ನುವ ಆರೋಪವಿದೆ.

shivamogga BJP leader Sarath Kalyani arrested in rape case

ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿರುವ ಆರೋಪದ ಮೇಲೆ ಶರತ್ ಕಲ್ಯಾಣಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ಶರತ್ ಕಲ್ಯಾಣಿ ತಲೆಮರೆಸಿಕೊಂಡಿದ್ದರು.

ಬಳಿಕ ಪೊಲೀಸರು ಶರತ್ ಕಲ್ಯಾಣಿ ಪತ್ತೆಗಾಗಿ ಬಲೆ ಬೀಸಿದ್ದರು. ಒಂದು ವಾರದಿಂದ ತಲೆಮರಿಸಿಕೊಂಡಿದ್ದ ಆರೋಪಿ ಸದ್ಯ ಪೊಲೀಸ್ ಬಲೆಗೆ ಬಿದ್ದಾನೆ. ತಲೆಮರಿಸಿಕೊಂಡಿದ್ದ ಬಿಜೆಪಿ ಮುಖಂಡ ಶರತ್ ಕಲ್ಯಾಣಿ ಬಿಜಾಪುರದಲ್ಲಿ ಪತ್ತೆಯಾದ ಬೆನ್ನಲ್ಲೆ ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಆತನ ಕೈಗೆ ಕೋಳತೊಡಿಸಿದ್ದಾರೆ.

shivamogga BJP leader Sarath Kalyani arrested in rape case

ಜುಲೈ.26 ರಂದು ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈತನ ಮೇಲೆ ನಾಲ್ಕು ಲಕ್ಷ ಹಣ ಪಡೆದು ವಂಚಿಸಿರುವ ಆರೋಪವೂ ಇದೆ. ಈಗ ಈತನನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+