Shivamogga Airport: ಶಿವಮೊಗ್ಗ ಏರ್‌ಪೋರ್ಟ್‌ಗೆ ಒಂದು ವರ್ಷ; ಪ್ರಯಾಣಿಕರು, ವಿಮಾನದ ಮಾಹಿತಿ

ಶಿವಮೊಗ್ಗ, ಫೆಬ್ರವರಿ 28: ಶಿವಮೊಗ್ಗ ಜಿಲ್ಲಾ ಅಭಿವೃದ್ಧಿಯ ಮಹತ್ವದ ಹೆಜ್ಜೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಂಡು ಒಂದು ವರ್ಷ ಪೂರೈಸಿದೆ. ರಾಜ್ಯದಲ್ಲಿರುವ ಕೆಲವು ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಶಿವಮೊಗ್ಗ ವಿಮಾನ ನಿಲ್ದಾಣ ಒಂದು ವರ್ಷದಲ್ಲೇ ನಿರೀಕ್ಷಿಸಿದ ಮಟ್ಟಕ್ಕಿಂತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಅಸ್ಥಿತ್ವಕ್ಕೆ ಬಂದು ಒಂದು ವರ್ಷವಷ್ಟೇ ಕಳೆದಿದ್ದು, ಈ ಅಲ್ಪ ಅವಧಿಯಲ್ಲಿ ವಾಯುಯಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ವಿಮಾನ ನಿಲ್ದಾಣ ಉದ್ಘಾಟನೆಗೊಂಡ ದಿನದಿಂದ ರಾಜಕೀಯ ಗಣ್ಯರು ಸೇರಿದಂತೆ ನಿತ್ಯ ನೂರಾರು ಪ್ರಯಾಣಿಕರು ವಿವಿಧೆಡೆ ಹಾರಾಟ ನಡೆಸುತ್ತಿದ್ದಾರೆ.

Shivamogga Airport Successfully Completed One year

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಸ್ಟ್‌ 31, 2023ರಿಂದ ಫೆಬ್ರವರಿ 26, 2024ರ ವರೆಗೆ 288 ಬಾರಿ ವಿಮಾನಗಳು ಆಗಮನ ಮತ್ತು ನಿರ್ಗಮನವಾಗಿವೆ. ಹೈದರಾಬಾದ್‌, ತಿರುಪತಿ, ಗೋವಾ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಂದ ಶಿವಮೊಗ್ಗಕ್ಕೆ 11,681 ಜನ, ಶಿವಮೊಗ್ಗದಿಂದ ವಿವಿಧೆಡೆ 13,401 ಜನ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದಾರೆ.

ವರದಿ ಪ್ರಕಾರ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಆರಂಭಗೊಂಡ ಇಷ್ಟು ಕಡಿಮೆ ಸಮಯದಲ್ಲಿ ಹೆಚ್ಚಿನ ಮಾರ್ಗಗಳಿಗೆ ವಿಮಾನ ಸಂಚಾರ ಲಭ್ಯವಾಗಿದ್ದಲ್ಲದೇ ಜನಸ್ಪಂದನೆಯೂ ನಿರೀಕ್ಷೆಯಷ್ಟಿದೆ. ಇದು ಉತ್ತಮ ಬೆಳವಣಿಗೆಯಾಗಿದೆ.

2007ರಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಉಪ ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಬರೋಬ್ಬರಿ 15 ವರ್ಷಗಳ ನಂತರ ಈ ಕಾಮಗಾರಿಗೆ ಮರುಜೀವ ಸಿಕ್ಕಿ 2023ರಲ್ಲಿ ಉದ್ಘಾಟನೆಗೊಂಡು, ಪ್ರಯಾಣಿಕರ ಸೌಲಭ್ಯಕ್ಕೆ ಮುಕ್ತವಾಗಿತ್ತು.

Shivamogga Airport Successfully Completed One year

ಶಿವಮೊಗ್ಗ ವಿಮಾನ ನಿಲ್ದಾಣಕ್ಕಿಲ್ಲ ನಾಮಕರಣ ಭಾಗ್ಯ

ಶಿವಮೊಗ್ಗ ವಿಮಾನ ನಿಲ್ದಾಣ ಎಂದೇ ಕರೆಯುತ್ತಿರುವ ಈ ವಿಮಾನ ನಿಲ್ದಾಣಕ್ಕೆ ಉದ್ಘಾಟನೆಗೊಂಡು ಒಂದು ವರ್ಷವಾದರೂ ಹೆಸರಿಟ್ಟಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇನ್ನೂ ನಾಮಕರಣ ಭಾಗ್ಯ ಸಿಕ್ಕಿಲ್ಲ. ಮೊದಲು ಮೊದಲು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಹೆಸರು ಇಡಬೇಕು ಎನ್ನುವ ಆಗ್ರಹ ಕೇಳಿಬಂದಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸ್ವತಃ ಬಿ.ಎಸ್‌ ಯಡಿಯೂರಪ್ಪ ತನ್ನ ಹೆಸಡಿದಂತೆ ತಿಳಿಸಿದ್ದರು. ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ.

Shivamogga airport one year flight and passenger details. Know more,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+