ಶಿವಮೊಗ್ಗದಲ್ಲಿ ರೌಡಿ ಸ್ಟಾಟ್‌ ನಾಗನ ಹತ್ಯೆ

ಶಿವಮೊಗ್ಗ, ಸೆ.3 : ಹಲವಾರು ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಸ್ಪಾಟ್ ನಾಗನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬುಧವಾರ ಮುಂಜಾನೆ ಸ್ಟಾಟ್‌ ನಾಗನ ಶವ ಸಾಗರ ರಸ್ತೆಯಲ್ಲಿ ಪತ್ತೆಯಾಗಿದೆ. ಹದಿನೈದು ದಿನಗಳ ಹಿಂದೆ ನಾಗ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಮಂಗಳವಾರ ರಾತ್ರಿ 11.30ರ ಸುಮಾರಿಗೆ ಸ್ಪಾಟ್‌ ನಾಗ (35) ಸಾಗರ ರಸ್ತೆಯಲ್ಲಿರುವ ನಾಡಕಚೇರಿ ಬಳಿ ಹೋಗುತ್ತಿದ್ದಾಗ, ಅವನನ್ನು ಹಿಂಬಾಲಿಸಿದ ಐವರು ದುಷ್ಕರ್ಮಿಗಳ ತಂಡ, ಮಚ್ಚು, ಲಾಂಗುಗಳಿಂದ ದಾಳಿ ಮಾಡಿ ಕೊಲೆ ಮಾಡಿದೆ. ಶಿವಮೊಗ್ಗದ ಕುಖ್ಯಾತ ರೌಡಿಗಳಾದ ಲವ-ಕುಶ ಹತ್ಯೆ ನಡೆದ ಸ್ಥಳದಲ್ಲಿಯೇ ಈ ಕೊಲೆ ನಡೆದಿದೆ.

Rowdy

ಮುಂಜಾನೆಯ ತನಕ ಕೊಲೆಯಾದ ವಿಷಯ ಬೆಳಕಿಗೆ ಬಂದಿರಲಿಲ್ಲ. ಬೆಳಗ್ಗೆ ಶವ ನೋಡಿದ ಜನರು ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಲೆಯಾದ ವ್ಯಕ್ತಿ ಸ್ಪಾಟ್ ನಾಗ ಎಂದು ಖಚಿತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿದಾಗಿ ಹುಡುಕಾಟ ಆರಂಭಿಸಿದ್ದಾರೆ. [ಡೆಡ್ಲಿ ಸೋಮನ ಬಂಟ ಕವಳ ಭೀಕರ ಕೊಲೆ]

2005ರಲ್ಲಿ ಬೆಂಗಳೂರಿನಲ್ಲಿ ನಡೆದ ಕೊಲೆ, ಶಿವಮೊಗ್ಗದಲ್ಲಿ 2013ರಲ್ಲಿ ನಡೆದ ನವುಲೆ ಮೋಹನನ ಕೊಲೆಯಲ್ಲಿ ಸ್ಪಾಟ್‌ ನಾಗ ಪ್ರಮುಖ ಆರೋಪಿಯಾಗಿದ್ದ. ಪೊಲೀಸರು ನಾಗನನ್ನು ಬಂಧಿಸಿದ್ದರು, ಗುಲ್ಬರ್ಗ ಜೈಲಿನಲ್ಲಿದ್ದ ನಾಗ 15 ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ, ಎರಡು ದಿನದ ಹಿಂದೆ ಶಿವಮೊಗ್ಗಕ್ಕೆ ಆಗಮಿಸಿದ್ದ.

ಹೆಬ್ಬೆಟ್ಟು ಮಂಜನ ಕೈವಾಡ? : 2012ರಲ್ಲಿ ಸ್ಪಾಟ್‌ನಾಗ ನನಗೆ ಅವಕಾಶ ಸಿಕ್ಕರೆ ಹೆಬ್ಬೆಟ್ಟು ಮಂಜನ ಕಥೆ ಮುಗಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದ. ಆದ್ದರಿಂದ ಸ್ಪಾಟ್‌ ನಾಗನ ಕೊಲೆಯಲ್ಲಿ ಹೆಬ್ಬೆಟ್ಟು ಮಂಜನ ಪಾತ್ರವಿರಬಹುದು ಎಂದು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+