ಶಿವಮೊಗ್ಗದಲ್ಲಿನ ಮಳೆ ಪ್ರಮಾಣ; ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ...

ಶಿವಮೊಗ್ಗ, ಆಗಸ್ಟ್‌ 06: ಮಲೆನಾಡಿನಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 674.88 ಮಿ.ಮೀ. ಮಳೆಯಾಗಿದ್ದು, ಸರಾಸರಿ 96.41 ಮಿ.ಮೀ. ಮಳೆ ದಾಖಲಾಗಿದೆ.

ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 417.87 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 203.31 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗ 44.60, ಭದ್ರಾವತಿ 35.60, ತೀರ್ಥಹಳ್ಳಿ 191.60, ಸಾಗರ 64.08, ಶಿಕಾರಿಪುರ 34.60, ಸೊರಬ 86.20 ಹಾಗೂ ಹೊಸನಗರ 218.20 ಮಿ.ಮೀ. ಮಳೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ನದಿ, ಹಳ್ಳಕೊಳ್ಳಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಶಾಲಾ ಕಟ್ಟಡಗಳು, ನದಿ ಸೇತುವೆಗಳ ಮೇಲೆ ನೀರು ತುಂಬಿಕೊಂಡಿದ್ದು, ಕೆಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಅಧಿಕಾರಿಗಳು, ನೌಕಕರು ಕೇಂದ್ರ ಸ್ಥಾನದಲ್ಲಿರಲು ಸೂಚಿಸಲಾಗಿದೆ.

Rain Continues In Malenadu And Shivamogga Reservoirs Water Level Increased

ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ ಗಳಲ್ಲಿ):
ಲಿಂಗನಮಕ್ಕಿ: 1819 (ಗರಿಷ್ಠ), 1776.60 (ಇಂದಿನ ಮಟ್ಟ), 62003.00 (ಒಳಹರಿವು), 0.00 (ಹೊರಹರಿವು).
ಭದ್ರಾ: 186 (ಗರಿಷ್ಠ), 153.30 (ಇಂದಿನ ಮಟ್ಟ), 22203.00 (ಒಳಹರಿವು), 2180.00 (ಹೊರಹರಿವು).
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 43385.00 (ಒಳಹರಿವು), 43385.00 (ಹೊರಹರಿವು).
ಮಾಣಿ: 595 (ಎಂಎಸ್‍ಎಲ್ ಗಳಲ್ಲಿ), 578.18 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 10266 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್ ಗಳಲ್ಲಿ), 570.44 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 4840.00 (ಒಳಹರಿವು), 1103 (ಹೊರಹರಿವು ಕ್ಯೂಸೆಕ್ ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್ ಗಳಲ್ಲಿ), 577.66 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 5248.00 (ಒಳಹರಿವು), 784.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+