ರಾಜ್ಯದ ವಿದ್ಯುತ್ ಕೊರತೆ ನೀಗಿಸಿದ ಶರಾವತಿ ವಿದ್ಯುದಾಗಾರ

ಶಿವಮೊಗ್ಗ, ಅಕ್ಟೋಬರ್ 25 : ಕಲ್ಲಿದ್ದಲು ಕೊರತೆಯಿಂದಾಗಿ ಕರ್ನಾಟಕದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿದೆ. ಶರಾವತಿ ವಿದ್ಯುದಾಗಾರಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಲಾಗಿದ್ದು, ವಿದ್ಯುತ್ ಕೊರತೆ ನೀಗಿಸಲಾಗುತ್ತಿದೆ.

2018ರಲ್ಲಿ ಸುರಿದ ಮುಂಗಾರು ಮಳೆಗೆ ಈಗ ರಾಜ್ಯದ ಜನರು ಧನ್ಯವಾದ ಅರ್ಪಿಸಬೇಕು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಲಿಂಗನಮಕ್ಕಿ ಜಲಾಶಯ ಭರ್ತಿಯಾದ ಕಾರಣ ಈಗ ಜಲ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ.

ಶರಾವತಿ ವಿದ್ಯುದಾಗಾರ ರಾಜ್ಯದ ವಿದ್ಯುತ್ ವ್ಯವಸ್ಥೆಗೆ ಜೀವನಾಡಿಯಾಗಿದೆ. ಈಗ ರಾಜ್ಯದಲ್ಲಿ ವಿದ್ಯುತ್ ಕೊರತೆ ಆಗಿರುವುದರಿಂದ ಹೆಚ್ಚಿನ ವಿದ್ಯುತ್‌ ಅನ್ನು ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಿಕೊಂಡು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿ, ಕೊರತೆ ನೀಗಿಸಲಾಗುತ್ತಿದೆ.

ಶರಾವತಿ ವಿದ್ಯುದಾಗಾರದಲ್ಲಿ 10 ಯೂನಿಟ್‌ಗಳಿವೆ. ಇವುಗಳಲ್ಲಿ 9 ಯೂನಿಟ್‌ನಲ್ಲಿ ಪ್ರತಿದಿನ 18-19 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಜೋಗ, ಗೇರುಸೊಪ್ಪ ಸೇರಿದಂತೆ ಇತರ ಕೇಂದ್ರಗಳಲ್ಲೂ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ....

ಎಷ್ಟು ವಿದ್ಯುತ್ ಉತ್ಪಾದನೆ

ಎಷ್ಟು ವಿದ್ಯುತ್ ಉತ್ಪಾದನೆ

ಶರಾವತಿ ವಿದ್ಯುದಾಗಾರದಲ್ಲಿ 9 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಈಗ ಉಷ್ಣ ವಿದ್ಯುತ್ ಸ್ಥಾವರಗಳು ಉತ್ಪಾದನೆ ನಿಲ್ಲಿಸಿದ ಬಳಿಕ ಬೇಡಿಕೆ ಹೆಚ್ಚಿದೆ. ಆದ್ದರಿಂದ, ಪ್ರತಿದಿನ 18 ರಿಂದ 19 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿ ಪ್ರತಿದಿನ ಗರಿಷ್ಠ ಎಂದರೆ 24 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ.

ಲಿಂಗನಮಕ್ಕಿ ಡ್ಯಾಂ ನೀರು

ಲಿಂಗನಮಕ್ಕಿ ಡ್ಯಾಂ ನೀರು

ಶರಾವತಿ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಇದರಿಂದಾಗಿ ವಿದ್ಯುತ್ ಬೇಡಿಕೆ ಪೂರೈಸಲಾಗುತ್ತಿದೆ. ಇದಕ್ಕಾಗಿ ರಾಜ್ಯದ ಜನರು ಮುಂಗಾರು ಮಳೆಗೆ ಧನ್ಯವಾದ ಹೇಳಬೇಕಿದೆ. ಲಿಂಗನಮಕ್ಕಿ ಜಲಾಶಯ ಭರ್ತಿಯಾದ ಕಾರಣ ಇಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ. ಲಿಂಗನಮಕ್ಕಿಯಿಂದ 1.5 ಕಿ.ಮೀ.ಸುರಂಗ ಮಾರ್ಗ, 3.6 ಕಿ.ಮೀ. ಉದ್ದದ ತೆರೆದ ಚಾನೆಲ್ ಮೂಲಕ ವಿದ್ಯುದಾಗಾರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ.

ಮಳೆಗಾಲದ ತನಕ ನೀರು

ಮಳೆಗಾಲದ ತನಕ ನೀರು

'ಮೂರು ವರ್ಷಗಳ ಬಳಿಕ ಈ ವರ್ಷ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. ಆದ್ದರಿಂದ, ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಲು ಸಾಧ್ಯವಾಗಿದೆ. ಮುಂದಿನ ಮಳೆಗಾಲದ ತನಕ ನೀರನ್ನು ಉಳಿಸಿಕೊಳ್ಳಬೇಕು. ಆದ್ದರಿಂದ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾದ ಬಳಿಕ ಪ್ರತಿದಿನ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಲಾಗುತ್ತದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿವಿಧ ವಿದ್ಯುತ್ ಘಟಕಗಳು

ವಿವಿಧ ವಿದ್ಯುತ್ ಘಟಕಗಳು

ಶರಾವತಿ ಮಾತ್ರವಲ್ಲ ಗೇರುಸೊಪ್ಪದಲ್ಲಿ 2.5 ಮಿಲಿಯನ್ ಯೂನಿಟ್, ಮಹಾತ್ಮಾ ಗಾಂಧಿ ಕೇಂದ್ರದಿಂದ 0.4 ರಿಂದ 0.5 ಯೂನಿಟ್, ಲಿಂಗನಮಕ್ಕಿ ಕೇಂದ್ರದಿಂದ 55 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+