1 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ವಿವಿಧ ಪ್ರಕೋಷ್ಠಗಳಲ್ಲಿ ಅವಕಾಶ

ಶಿವಮೊಗ್ಗ, ಡಿಸೆಂಬರ್ 14: ರಾಜ್ಯ ಬಿಜೆಪಿಯಲ್ಲಿ 24 ವಿವಿಧ ಮೋರ್ಚಾಗಳು ರಚನೆಯಾಗಿದ್ದು, ಒಟ್ಟಾರೆಯಾಗಿ ಸದ್ಯ 1 ಲಕ್ಷ ಕಾರ್ಯಕರ್ತರಿಗೆ ವಿವಿಧ ಪ್ರಕೋಷ್ಠಗಳಲ್ಲಿ ಅವಕಾಶ ಮಾಡಿಕೊಡಲು ಕಾರ್ಯತತ್ಪರಾಗಿದ್ದೇವೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಪ್ರಕೋಷ್ಠ ಸಂಯೋಜಕ ಎಂ.ಬಿ ಭಾನುಪ್ರಕಾಶ್ ಹೇಳಿದ್ದಾರೆ.

ಈ ಕುರಿತಂತೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, 24 ಮೋರ್ಚಾಗಳು ರಾಜ್ಯದಲ್ಲಿ ರಚನೆಯಾಗಿದೆ. ಕೆಲವು ಪ್ರಕೋಷ್ಠದ ಜೊತೆಯಲ್ಲಿ ಮಾಧ್ಯಮ ವಿಭಾಗ, ಸೋಷಿಯಲ್ ಮೀಡಿಯಾ, ಪ್ರಕಾಶನ ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಸಂಯೋಜಕರಾಗಿ ನನ್ನೊಂದಿಗೆ ದಾವಣಗೆರೆಯ ಡಾ.ಶಿವಯೋಗಿ ಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ ಎಂದರು.

ರಾಜ್ಯ ಸಮಿತಿಯಲ್ಲಿ 11, ಜಿಲ್ಲಾ ಸಮಿತಿಯಲ್ಲಿ 9 ಹಾಗೂ ಮಂಡಲ ಸಮಿತಿ 7 ಜನರನ್ನು ನೇಮಕ ಮಾಡಲಾಗಿದ್ದು, 50 ಸಾವಿರ ಕಾರ್ಯಕರ್ತರಿಗೆ ಸೇರಿಸುವ ಹೊಣೆಯಿದೆ. ಅಲ್ಲದೇ, ಬೂತ್ ಸ್ಥಳದವರೆಗೂ 1 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ಈ ಪ್ರಕೋಷ್ಠಗಳಲ್ಲಿ ಅವಕಾಶ ಮಾಡಿಕೊಡಲು ಪ್ರಯತ್ನ ಆರಂಭವಾಗಿದೆ ಎಂದು ತಿಳಿಸಿದರು.

Shivamogga: Opportunity For 1 Lakh BJP Activists In Various Branches: MB Bhanuprakash

ರಾಜ್ಯ ಸಮಿತಿಯ ಮೊದಲ ಸಭೆ ಡಿ.20 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ರಾಜ್ಯದಲ್ಲಿನ ಸಂಘಟನೆ ಕುರಿತಾಗಿ ಚರ್ಚೆ ನಡೆಯಲಿದೆ. ಸಮಾಜದ ಗಣ್ಯರು, ಪ್ರತಿಷ್ಠಿತರು ಹಾಗೂ ಪ್ರತಿಭಾನ್ವಿತರನ್ನು ಹುಡುಕಿ ಬಿಜೆಪಿಯೊಂದಿಗೆ ಸಂಯೋಜನೆ ಮಾಡಿಕೊಳ್ಳುವ ಪ್ರಯತ್ನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಾಧ್ಯಮದವರನ್ನೂ ಸಹ ಸೇರಿಸಿಕೊಳ್ಳಲಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ 1 ಲಕ್ಷ ಕಾರ್ಯಕರ್ತರಿಗೆ ಪ್ರಕೋಷ್ಠಗಳಿಗೆ ಸೇರಿಸಿಕೊಳ್ಳುವ ಗುರಿಯಿದೆ ಎಂದು ಮಾಧ್ಯಮ ಪ್ರಕೋಷ್ಠ ಸಂಯೋಜಕ ಎಂ.ಬಿ ಭಾನುಪ್ರಕಾಶ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+