ಶಿವಮೊಗ್ಗದಲ್ಲಿ ಓಪನ್ ರೌಡಿಸಂ, ಪಾರ್ಲರ್ ಮೇಲೆ ಪೊಲೀಸರ ದಾಳಿ!

ಶಿವಮೊಗ್ಗ ಆಗಸ್ಟ್ 20: ಶಿವಮೊಗ್ಗದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ. ರೌಡಿಗಳ ಓಪನ್ ಅಟ್ಯಾಕ್ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಲಾಂಗು ಹಿಡಿದು ಅಟ್ಯಾಕ್ ಮಾಡಿದ ವೀಡಿಯೋ ವೈರಲ್ ಆಗಿದೆ. ಶಿವಮೊಗ್ಗದಲ್ಲಿ ನಡೆದ ಈ ಓಪನ್ ರೌಡಿಸಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಶಿವಮೊಗ್ಗ ಸವಳಂಗ ರಸ್ತೆಯ ಎಲ್‌ಬಿಎಸ್ ನಗರ ಬಳಿ ಈ ಘಟನೆ ನಡೆದಿದೆ. ಪೋಲಾರ್ ಬೇರ್ ಐಸ್ಕೀಂ ಪಾರ್ಲರ್ ಬಳಿ ಬೈಕ್‌ನಲ್ಲಿ ಬಂದ ಪುಡಿ ರೌಡಿಗಳ ಗ್ಯಾಂಗ್ ಯುವಕನ ಮೇಲೆ ಅಟ್ಯಾಕ್ ಮಾಡಿದೆ. ಬೈಕ್ ಮೇಲಿಂದ ಇಳಿದು ಲಾಂಗು ಹಿಡಿದು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ವಿನೋಬಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Open rowdism in Shivamogga police attack on parlor

ಆದರೆ ಲಾಂಗು ಹಿಡಿದು ಯಾರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಈ ಪುಡಿ ರೌಡಿಗಳ ಅಟ್ಟಹಾಸದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಡಿ ಮೆಸಾಜ್ ಪಾರ್ಲರ್ ಮೇಲೆ ಪೊಲೀಸರ ದಾಳಿ

ಬಾಡಿ ಮೆಸಾಜ್ ಪಾರ್ಲರ್ ಮೇಲೆ ಪೊಲೀಸರ ದಾಳಿ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ವಿನೋಬನಗರ ಬಡಾವಣೆಯ ಚೌಕಿ ಸರ್ಕಲ್ ನಲ್ಲಿರುವ ಲೈರಾ ಹರ್ಬಲ್ ಬಾಡಿ ಮೆಸಾಜ್ ಹಾಗೂ ಪಾರ್ಲರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ವೇಶ್ಯಾವಾಟಿಕೆ ಆರೋಪದ ಮೇರೆಗೆ ದಾಳಿ ಮಾಡಿದ್ದ ವಿನೋಬನಗರ ಠಾಣೆ ಪೊಲೀಸರು, ದಾಳಿ ವೇಳೆ ಮೂವರು ಯುವಕರು ಹಾಗೂ ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+