ಮನೆಯಲ್ಲಿ ಕುಳಿತೇ ಡಿಎಲ್ ಪಡೆಯಲು ಅರ್ಜಿ ಹಾಕಿ!

ಶಿವಮೊಗ್ಗ, ಮೇ 30 : ಸಾರಿಗೆ ಇಲಾಖೆ 'ಸಾರಥಿ 4' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದೆ. ಜನರು ಈ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಚಾಲನಾ ಪರವಾನಿಗೆ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಾಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಿ.ದೇವರಾಜ್ ಈ ಕುರಿತು ಮಾಹಿತಿ ನೀಡಿದ್ದಾರೆ. 'ಈ ತಂತ್ರಜ್ಞಾವನ್ನು ಬಳಸಿ ಸಾರ್ವಜನಿಕರು ಮನೆಯಿಂದಲೇ ಆ್ಯಪ್‍ನಲ್ಲಿ ಕಲಿಕಾ ಲೈಸೆನ್ಸ್ ಮತ್ತು ಪಕ್ಕಾ ಚಾಲನಾ ಲೈಸೆನ್ಸ್ ಪಡೆಯಲು ಮದ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ' ಎಂದರು.

ಈ ಹಿಂದೆ ಸಾರಥಿ-3 ಎಂಬ ಆ್ಯಪ್‍ ಅನ್ನು ಬಳಸಲಾಗುತ್ತಿತ್ತು. ಅದರಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ದಾಖಲೆಗಳ ಪರಿಶೀಲನೆಗೆ ಕಚೇರಿಗೆ ಅಲೆಯಬೇಕಾಗಿತ್ತು. ಈಗ ಎಲ್ಲಾ ದಾಖಲೆಗಳನ್ನು ಆನ್‍ಲೈನ್ ಮುಖಾಂತರವೇ ಸಲ್ಲಿಸಿ, ನಂತರ ಅರ್ಜಿದಾರರು ತಮಗೆ ಅನುಕೂಲವಾದ ದಿನಾಂಕ ಮತ್ತು ಸಮಯವನ್ನು ಇಲಾಖಾ ಪರೀಕ್ಷೆಗೆ ಕಾಯ್ದಿರಿಸಬಹುದಾಗಿದೆ.

Now apply for driving licence through mobile applications

ಅರ್ಜಿ ಸಲ್ಲಿಕೆ ಹೇಗೆ? : ಸಾರಥಿ-4ರಲ್ಲಿ ಕಲಿಕಾ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದ ನಂತರದಲ್ಲಿ ಗಣಕಯಂತ್ರದಲ್ಲಿ ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯವಾಗಿದ್ದು, ಆನ್‍ಲೈನ್‍ನಲ್ಲಿ 15ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಪ್ರಕ್ರಿಯೆಯಲ್ಲಿ ಕನಿಷ್ಟ 10ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿ ತೇರ್ಗಡೆ ಹೊಂದಿದಲ್ಲಿ ಕಲಿಕಾ ಪರವಾನಿಗೆ ಲಭ್ಯವಾಗಲಿದೆ.

http;/parivahan.gov.in ನಲ್ಲಿ ಅರ್ಜಿದಾರರು ಕಲಿಕಾ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಚಾಲನಾ ಪರವಾನಿಗೆ ಪಡೆಯುವವರೆಗೂ ಮೊಬೈಲ್ ಮೂಲಕವೇ ಮಾಹಿತಿ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+