ಶಿವಮೊಗ್ಗ; ಬಿಜೆಪಿಗೆ ಮಹಾನಗರ ಪಾಲಿಕೆ ಅಧಿಕಾರ ನೂತನ ಮೇಯರ್ ಆಯ್ಕೆ

ಶಿವಮೊಗ್ಗ, ಅಕ್ಟೋಬರ್‌, 28; ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಶಿವಕುಮಾರ್, ಉಪ ಮೇಯರ್ ಆಗಿ ಲಕ್ಷ್ಮಿ ಶಂಕರನಾಯ್ಕ್ ಆಯ್ಕೆಯಾಗಿದ್ದಾರೆ.

ಶುಕ್ರವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಬಿಜೆಪಿಯಿಂದ ಗುರುಪುರ - ಪುರಲೆ ವಾರ್ಡ್ ಪಾಲಿಕೆ ಸದಸ್ಯ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದಿಂದ ಮಲವಗೊಪ್ಪದ ವಾರ್ಡ್ ಪಾಲಿಕೆ ಸದಸ್ಯ ಆರ್. ಸಿ. ನಾಯ್ಕ್ ಸ್ಪರ್ಧೆ ಮಾಡಿದ್ದರು.

ಚುನಾವಣೆಯಲ್ಲಿ ಬಿಜೆಪಿಯ ಶಿವಕುಮಾರ್ ಅವರಿಗೆ 26 ಮತಗಳು ಲಭಿಸಿವೆ. ಜೆಡಿಎಸ್ -ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಆರ್. ಸಿ. ನಾಯ್ಕ್ ಅವರಿಗೆ 11 ಮತಗಳು ಸಿಕ್ಕಿವೆ.

New Mayor, Deputy Mayor elected for Shivamogga City Corporation

ಇನ್ನು ಉಪ ಮೇಯರ್ ಸ್ಥಾನ ಬಿಸಿಎಂ (ಎ) ವರ್ಗದ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಿಂದ ನ್ಯೂ ಮಂಡ್ಲಿ ವಾರ್ಡ್ ಸದಸ್ಯೆ ಲಕ್ಷ್ಮಿ ಶಂಕರನಾಯ್ಕ್ ಮತ್ತು ಕಾಂಗ್ರೆಸ್ ಪಕ್ಷದಿಂದ ಹೊಸಮನೆ ವಾರ್ಡ್ ಸದಸ್ಯೆ ರೇಖಾ ರಂಗನಾಥ್ ಅವರು ಸ್ಪರ್ಧೆ ಮಾಡಿದ್ದರು.

ಅಂತಿಮವಾಗಿ ಲಕ್ಷ್ಮಿ ಶಂಕರನಾಯ್ಕ್ ಅವರಿಗೆ 26 ಮತಗಳು ಲಭಿಸಿವೆ. ರೇಖಾ ರಂಗನಾಥ್ ಅವರಿಗೆ 11 ಮತಗಳು ಬಿದ್ದಿವೆ. ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+