ಶಿವಮೊಗ್ಗ; ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಶಿವಮೊಗ್ಗ, ಡಿಸೆಂಬರ್ 6: ತಾಯಿಯನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿದ್ದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲಾ ಆಸ್ಪತ್ರೆಯ ವಾರ್ಡ್‌ ಬಾಯ್ ಮತ್ತು ಆತನ ಸ್ನೇಹಿತರ ಮೇಲೆ ಪ್ರಕರಣ ದಾಖಲಾಗಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಯಿಯ ಜೊತೆ ಇದ್ದ ಅಪ್ರಾಪ್ತಾ ಬಾಲಕಿಯನ್ನು ಊಟ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಆಸ್ಪತ್ರೆಯ ವಾರ್ಡ್‌ಬಾಯ್ ಮನೋಜ್ ಅಪ್ರಾಪ್ತ ಬಾಲಕಿ ಪರಿಚಯ ಮಾಡಿಕೊಂಡಿದ್ದ. ಹೋಟೆಲ್‌ನಿಂದ ಆಗಾಗ ರೋಗಿ ಮತ್ತು ಬಾಲಕಿಗೆ ಊಟ ತಂದು ಕೊಡುತ್ತಿದ್ದ. ಕೋಮು ಗಲಭೆಯ ಕಾರಣದಿಂದಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

Minor Girl Gang Raped Case Registered

ಶನಿವಾರ ರಾತ್ರಿ ಊಟ ಕೊಡಿಸುವುದಾಗಿ ಬಾಲಕಿಯನ್ನು ಕಾರಿನಲ್ಲಿ ಮನೋಜ್ ಕರೆದುಕೊಂಡು ಹೋಗಿದ್ದ. ಅದೇ ಕಾರಿನಲ್ಲಿ ಪ್ರಜ್ವಲ್ ಮತ್ತು ವಿನಯ್ ಇದ್ದರು. ಸಾಗರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೂವರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಬಾಲಕಿ ಆಸ್ಪತ್ರೆಗೆ ವಾಪಸ್ ಬಂದ ಬಳಿಕ ತಾಯಿಗೆ ವಿಚಾರ ತಿಳಿಸಿದ್ದಾಳೆ. ಬಳಿಕ ಆಸ್ಪತ್ರೆಯಲ್ಲಿರುವ ಸಖಿ ಕೇಂದ್ರಕ್ಕೆ ವಿಷಯ ತಿಳಿಸಿದ್ದಾರೆ. ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಶನಿವಾರ ಒಂದು ಗಂಟೆ ಮೊದಲೇ ಮನೋಜ್ ಸ್ನೇಹಿತರು ಆಸ್ಪತ್ರೆ ಆವರಣದಲ್ಲಿ ಕಾರನ್ನು ತಂದು ನಿಲ್ಲಿಸಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಹಲವು ದಿನಗಳಿಂದ ಯೋಜನೆ ರೂಪಿಸಿರುವ ಅನುಮಾನವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+