ಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳು

ಶಿವಮೊಗ್ಗದ, ಜೂನ್ 15 : ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗಬೇಕು ಎಂಬ ಜಿಲ್ಲೆಯ ಜನರ ಕನಸು ನನಸಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಯೋಜನೆಯ ವೆಚ್ಚ ಸುಮಾರು 220 ಕೋಟಿಯಾಗಿದೆ.

Recommended Video

      ಕರೋನ ವೈರಸ್ ಪವರ್ ಕಡಿಮೆ ಅಗಿದ್ಯಂತೆ | Oneindia Kannada

      ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದರು. ತವರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆಗಬೇಕು ಎಂಬುದು ಯಡಿಯೂರಪ್ಪ ಹಲವಾರು ವರ್ಷಗಳ ಕನಸು.

      ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಈಗಾಗಲೇ ಬೃಹತ್ ಯಂತ್ರಗಳು ಸ್ಥಳದಲ್ಲಿ ಕೆಲಸವನ್ನು ಆರಂಭಿಸಿವೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆಯಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

      ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ಸಿದ್ಧವಾಗಿತ್ತು. ಹಲವಾರು ಅಡೆ-ತಡೆಗಳ ಬಳಿಕ ಅಂತಿಮವಾಗಿ ಶಂಕುಸ್ಥಾಪನೆ ನಡೆದಿದೆ. ಈ ಮೂಲಕ ಮಲೆನಾಡು ಭಾಗದ ಜನರ ವರ್ಷಗಳ ಕನಸು ನನಸಾಗಿದೆ. ಯೋಜನೆಯ ಮುಖ್ಯಾಂಶಗಳು ಇಲ್ಲಿವೆ...

      ಯಡಿಯೂರಪ್ಪ ಹೇಳಿಕೆ

      ಯಡಿಯೂರಪ್ಪ ಹೇಳಿಕೆ

      ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಯಡಿಯೂರಪ್ಪ, "ಶಿವಮೊಗ್ಗ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ವಿಮಾನ ನಿಲ್ದಾಣ ನಿರ್ಮಾಣದಿಂದ ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ದೊರೆಯುವ ನಿರೀಕ್ಷೆ ಇದೆ" ಎಂದು ಹೇಳಿದರು.

      ಹಲವು ಅಡೆತಡೆಗಳು

      ಹಲವು ಅಡೆತಡೆಗಳು

      ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಹಲವು ಅಡೆತಡೆಗಳು ಬಂದಿದ್ದವು. ಈಗ ಸಂಸದ ಬಿ. ವೈ. ರಾಘವೇಂದ್ರ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಯೋಜನೆಗೆ ಇದ್ದ ಅಡೆ-ತಡೆಗಳನ್ನು ನಿವಾರಣೆ ಮಾಡಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ.

      220 ಕೋಟಿ ರೂ. ವೆಚ್ಚ

      220 ಕೋಟಿ ರೂ. ವೆಚ್ಚ

      ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. 662.38 ಎಕರೆಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಯೋಜನೆಯ ವೆಚ್ಚ 220 ಕೋಟಿ ರೂ.ಗಳು. ರನ್‌ ವೇ 1900 ಮೀಟರ್ ಉದ್ದವಿರಲಿದೆ.

      ಎರಡು ಹಂತದ ಕಾಮಗಾರಿ

      ಎರಡು ಹಂತದ ಕಾಮಗಾರಿ

      ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ 2 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ರನ್ ವೇ, ಟ್ಯಾಕ್ಸಿ ವೇ, ಏಫ್ರಾನ್, ಪೆರಿಫೆರಲ್ ರಸ್ತೆ ಮತ್ತು ಕಾಪೌಂಡ್ ನಿರ್ಮಾಣವಾಗಲಿದೆ. ಎರಡನೇ ಹಂತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟವರ್, ಫೈರ್ ಸ್ಟೇಷನ್ ಕಟ್ಟಡ ಇತ್ಯಾದಿ ಕೆಲಸಗಳು ನಡೆಯಲಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+