ಭೂಮಿ ಮಾತ್ರವಲ್ಲ ವಿಧಾನಸೌಧವನ್ನೂ ಮಾರಾಟ ಮಾಡ್ತಾರೆ : ಈಶ್ವರಪ್ಪ

Recommended Video

      ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೆ.ಎಸ್.ಈಶ್ವರಪ್ಪ .

      ಶಿವಮೊಗ್ಗ, ಜೂನ್ 17 : 'ಮೈತ್ರಿ ಸರ್ಕಾರ ಹಾಗೂ ಮಂತ್ರಿಗಳು ಏನು ಸಿಗುತ್ತೋ ಅದನ್ನು ಮಾರಾಟ ಮಾಡಿ ದುಡ್ಡು ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ' ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಜಿಂದಾಲ್‌ಗೆ 3,667 ಎಕರೆ ಭೂಮಿ ನೀಡುವ ವಿಚಾರದಲ್ಲಿ ಸರ್ಕಾರ ತೀರ್ಮಾನವನ್ನು ಖಂಡಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

      'ಸರ್ಕಾರ ಹಾಗೂ ಮಂತ್ರಿಗಳು ಏನು ಸಿಗುತ್ತದೆಯೋ ಅದನ್ನು ಮಾರಾಟ ಮಾಡಿ ದುಡ್ಡು ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ದೇಶ ಮಾರಾಟ ಮಾಡುವುದಕ್ಕೆ ಇವರಿಗೆ ಅವಕಾಶ ಇಲ್ಲ. ಅದಕ್ಕೆ ರಾಜ್ಯ ಮಾರಾಟ ಮಾಡುತ್ತಿದ್ದಾರೆ. ಬಿಟ್ಟರೇ ವಿಧಾನಸೌಧ ಸೇರಿ ಎಲ್ಲವನ್ನೂ ಮಾರಾಟ ಮಾಡಿ ಬಿಡುತ್ತಾರೆ' ಎಂದು ಆರೋಪಿಸಿದರು.

      Jindal row : KS Eshwarappa upset with DK Shivakumar and Siddaramaiah

      'ಜಿಂದಾಲ್‌ಗೆ 3,667 ಎಕರೆ ಭೂಮಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನೂ ಬಾಯಿ ಬಿಟ್ಟಿಲ್ಲ. ಕೇವಲ ಉಪಸಮಿತಿಯನ್ನು ರಚನೆ ಮಾಡಿಬಿಟ್ಟರೆ ಸಾಕೇ?' ಎಂದು ಕೆ.ಎಸ್.ಈಶ್ವರಪ್ಪ ಅವರು ಪ್ರಶ್ನೆ ಮಾಡಿದರು.

      'ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಿದ್ದರಾಮಯ್ಯ ಅವರು ಡ್ಯಾನ್ಸ್ ಮಾಡಿದ್ದೇನು?. ತೊಡೆ ತಟ್ಟಿದ್ದೇನು?,
      ಬೆಂಗಳೂರಿಂದ ಬಳ್ಳಾರಿ ತನಕ ಡ್ಯಾನ್ಸ್ ಮಾಡಿದ್ದರು. ಒಂದಿಂಚೂ ಭೂಮಿ ಬಿಟ್ಟುಕೊಡಲ್ಲ. ಗಣಿ ಉಳಿಸುತ್ತೇವೆ ಎನ್ನುತ್ತಿದ್ದರು' ಎಂದು ಈಶ್ವರಪ್ಪ ಲೇವಡಿ ಮಾಡಿದರು.

      'ಈಗ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಜಿಂದಾಲ್ ವಿಚಾರದಲ್ಲಿ ಏನು ಮಾತನಾಡದೇ ಸುಮ್ಮನೆ ಕುಳಿತಿದ್ದಾರೆ. ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ಅವರು ಭೂಮಿಯನ್ನು ಜಿಂದಾಲ್‌ಗೆ ಕೊಡುತ್ತೇವೆ ಎಂದು ಪದೇ-ಪದೇ ಹೇಳುತ್ತಿದ್ದಾರೆ' ಎಂದು ಈಶ್ವರಪ್ಪ ಹೇಳಿದರು.

      'ಇಷ್ಟ ಬಂದ ಹಾಗೇ ಕೊಡಲು ಅದೇನು ಸ್ವಂತ ಆಸ್ತಿಯೇ?, ಬೇಕಿದ್ದರೇ ಕನಕಪುರದಲ್ಲಿರುವ ನಿಮ್ಮ ಸ್ವಂತ ಆಸ್ತಿಯನ್ನು ಮಾರಾಟ ಮಾಡಿ. ರಾಜ್ಯದ ಆಸ್ತಿಯನ್ನು ಯಾವುದೋ ವ್ಯಕ್ತಿಗೆ ಮಾರಾಟ ಮಾಡಲು ಬಿಜೆಪಿ ಬಿಡುವುದಿಲ್ಲ' ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+