ಶಿವಮೊಗ್ಗದಲ್ಲಿ ಅಣ್ಣನಿಂದಲೇ ಅತ್ಯಾಚಾರ; ಸಂತ್ರಸ್ತ ಬಾಲಕಿ ನೇಣಿಗೆ ಶರಣು

ಶಿವಮೊಗ್ಗ, ಅಕ್ಟೋಬರ್ 2: ಬಾಲಕಿ ಮೇಲೆ ಆಕೆಯ ದೊಡ್ಡಪ್ಪನ ಮಗನಿಂದಲೇ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆಕೆ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದು (16) ಶಕುವಳ್ಳಿ ಗ್ರಾಮದವರಾಗಿದ್ದಾರೆ. ಬಾಲಕಿ ಆತ್ಮಹತ್ಯೆ ವೇಳೆ ಡೆತ್ ನೋಟ್ ಬರೆದಿದ್ದು, ಡೆತ್ ನೋಟ್ ಆಧಾರದ ಮೇರೆಗೆ ಬಾಲಕಿಯ ದೊಡ್ಡಪ್ಪನ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದು, ಇತ್ತೀಚೆಗೆ ಆಕೆ ಐದು ತಿಂಗಳ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆ ನಾಪತ್ತೆಯಾಗಿದ್ದನು.

ಇದರಿಂದ ಮನನೊಂದ ಹುಡುಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಹಾಕಿಕೊಂಡು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಸಾಯುವ ಮುನ್ನ, ನನ್ನ ಸಾವಿಗೆ ರಾಘವೇಂದ್ರನೇ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Shivamogga: Girl Committed Suicide As She Raped By Her Cousin

ಬಂಧಿತ ಆರೋಪಿ ಬಾಲಕಿಯ ದೊಡ್ಡಪ್ಪನ ಮಗ ರಾಘವೇಂದ್ರ (28) ಅರಾಸುರಳಿ ಗ್ರಾಮದ ವಾಸಿಯಾಗಿದ್ದು, ಈತನನ್ನು ಪೋಕ್ಸೊ ಕಾಯಿದೆಯಡಿ ಬಂಧಿಸಿ ವಿಚಾರಣೆ ಒಳಪಡಿಸಲಾಗಿದೆ ಎಂದು ಹೊಸ ನಗರ ಸಿಪಿಐ ಮಧುಸೂದನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+