ಶಿವಮೊಗ್ಗ: ಶಿಕ್ಷಣಾಧಿಕಾರಿ ಕಚೇರಿಯಲ್ಲೇ ಅಶ್ಲೀಲ ಚಿತ್ರ ವೀಕ್ಷಣೆ!

ಶಿವಮೊಗ್ಗ, ಡಿಸೆಂಬರ್ 08: ಜಿಲ್ಲೆಯ ಶಿಕಾರಿಪುರ ಬಿಇಓ ಕಚೇರಿಯಲ್ಲಿ ನೌಕರನೊಬ್ಬ ಕರ್ತವ್ಯದ ಅವಧಿಯಲ್ಲಿಯೇ ಇಲಾಖೆಯ ಕಂಪ್ಯೂಟರ್‌ನಲ್ಲಿ ಅಶ್ಲೀಲ ಚಿತ್ರ ನೋಡಿ ಮಾಧ್ಯಮಗಳಿಗೆ ಸಿಕ್ಕಿಬಿದ್ದಿದ್ದಾನೆ.

ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಡ್ಯಾಟಾ ಎಂಟ್ರಿ ಅಪರೇಟರ್ ಕೆಲಸ ನಿರ್ವಹಿಸುತ್ತಿದ್ದ ಸಂಕೇತ ಎಂಬುವಾತ ಕರ್ತವ್ಯದ ವೇಳೆ ಕಂಪ್ಯೂಟರ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ, ಈ ಕುರಿತ ಚಿತ್ರಗಳು ಸಹ ಲಭ್ಯವಿವೆ. ಈತ ಪ್ರತಿದಿನವೂ ಹೀಗೆ ಅಶ್ಲೀಶ ಚಿತ್ರಗಳನ್ನು ನೋಡುತ್ತಾನೆ ಎಂದು ಸಹೋದ್ಯೋಗಿಗಳು ಹೇಳಿದ್ದಾರೆ.

ಕರ್ತವ್ಯದ ವೇಳೆ ಕಚೇರಿಯಲ್ಲಿಯೇ ಅಶ್ಲೀಲ ಚಿತ್ರ ನೋಡಿರುವ ಸಂಕೇತ ಎಂಬಾತನ ಮೇಲೆ ಇನ್ನೂ ಹಲವು ಆರೋಪಗಳಿದ್ದು, ಈತ ಇಲಾಖೆಯ ಮಾಹಿತಿಗಳನ್ನು ಖಾಸಗಿ ಶಾಲೆಗಳೊಂದಿಗೆ ಹಂಚಿಕೊಂಡಿದ್ದಾನೆ ಎಂಬ ಆರೋಪ ಸಹ ಈ ಹಿಂದೆ ಕೇಳಿಬಂದಿತ್ತು.

Employee watch dirty movies in BEO office Shikaripura

ಈ ಬಗ್ಗೆ ಬಿಇಓ ಅವರಿಗೆ ದೂರು ನೀಡಿದ್ದು, ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿಂದೆ ಸಹ ಈತನ ಮೇಲೆ ಹಲವರು ದೂರುಗಳನ್ನು ನೀಡಿದ್ದರು ಎನ್ನಲಾಗಿದೆ. ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವ ಸುದ್ದಿ ಹೊರಬಿಳುತ್ತಿದ್ದಂತೆ ಶಿಕ್ಷಣ ಇಲಾಖೆಯ ಕೆಲ ಪ್ರಭಾವಿಗಳು ಮುಖಂಡರು ಮಾಧ್ಯಮದವರಿಗೆ ಕರೆ ಮಾಡಿ ಸುದ್ದಿಯನ್ನು ತಡೆಹಿಡಿಯಲು ಪ್ರಯತ್ನಿಸಿದ್ದಾರೆ.

Employee watch dirty movies in BEO office Shikaripura

ಕಚೇರಿಯಲ್ಲಿ ನಡೆಯುತ್ತಿದ್ದ ಇಲಾಖೆಯ ಸಭೆಯ ಮಾಹಿತಿಗಳನ್ನು ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ತಿಳಿಸುತ್ತಿದ್ದ ಎಂಬ ಆರೋಪವಿದ್ದು ಈ ಕುರಿತು ಇಲಾಖೆ ಸಭೆಯಲ್ಲಿ ಕೆಲ ಅಧಿಕಾರಿಗಳು ಇವನ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು ಅದರಂತೆ ಇತನನ್ನು ಕರ್ತವ್ಯ ದಿಂದ ಕೆಲ ದಿನಗಳ ಕಾಲ ತೆಗೆದು ಹಾಕಲಾಗಿದ್ದು ಆದರೆ ರಾಜಕೀಯ ಒತ್ತಡವೊ ಅಥವಾ ಹಣದ ಬಲದಿಂದಲೋ ಈತ ಮತ್ತೆ ಅದೇ ಕಚೇರಿಗೆ ಸೇರಿಕೊಂಡ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಇದ್ದರು ಸರಿಯಾದ ಕ್ರಮ ಕೈಗೊಂಡಿಲ್ಲ. ಸಂಕೇತ ಎಂಬಾತ ಪ್ರತಿ ದಿನ ಕಛೇರಿ ವೇಳೆಯಲ್ಲಿ ಆಶ್ಲೀಲ ಚಿತ್ರ ನೊಡುವುದನ್ನು ಕಂಡು ಕಛೇರಿಯ ಸಿಬ್ಬಂದ್ದಿಗಳು ಶಿಕ್ಷಕರು ಅಸಮಾಧನ ಗೊಂಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಸಂಭದಿಸಿದ ಅಧಿಕಾರಿಗಳಾಗಲಿ ಎಚ್ಚತ್ತು ಗೊಂಡು ಕ್ರಮ ಕೈ ಗೊಳ್ಳವ ಅಗತ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+