ಶಿವಮೊಗ್ಗ: 1 ಕೆ.ಜಿ ಪ್ಲಾಸ್ಟಿಕ್ ನೀಡಿ, 1 ಕೆ.ಜಿ ಅಕ್ಕಿ ಪಡೆಯಿರಿ!

ಶಿವಮೊಗ್ಗ, ನವೆಂಬರ್ 27: ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಅನೇಕ ಸಂಘ ಸಂಸ್ಥೆಗಳು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿವೆ. ಹಾಗೆಯೇ ಶಿವಮೊಗ್ಗದ ವಾಸವಿ ಮಹಿಳಾ ಸಂಘದ ಸದಸ್ಯರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

"ಒಂದು ಕೆ.ಜಿ ಪ್ಲಾಸ್ಟಿಕ್ ಕೊಟ್ಟು, ಒಂದು ಕೆ.ಜಿ ಅಕ್ಕಿ ತೆಗೆದುಕೊಳ್ಳಿ" ಎಂದು ಶಿವಮೊಗ್ಗದಲ್ಲಿ ಇಂದು ವಾಸವಿ ಮಹಿಳಾ ಸಂಘದ ಸದಸ್ಯರು ಪ್ಲಾಸ್ಟಿಕ್ ಬಳಸದಂತೆ ಹೊಸ ಅಭಿಯಾನ ನಡೆಸಿದ್ದಾರೆ.

ಎಲ್ಲೆಡೆ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಎಗ್ಗಿಲ್ಲದೆ ಹಾನಿಯಾಗುತ್ತಿದೆ. ಎಷ್ಟೋ ಮೂಕ ಪ್ರಾಣಿಗಳು ಈ ಬಿಸಾಡಿದ ಪ್ಲಾಸ್ಟಿಕ್ ತಿಂದು ಬಲಿಯಾಗಿವೆ. ಹೀಗಾಗಿ ಇದನ್ನು ತಡೆಯುವ ಪ್ರಯತ್ನವಾಗಿ ಸಂಘದ ಸದಸ್ಯರು ವಿನೂತನವಾಗಿ ಒಂದು ಕೆ.ಜಿ ಪ್ಲಾಸ್ಟಿಕ್ ಕೊಡಿ, ಪ್ರತಿಯಾಗಿ ಒಂದು ಕೆ.ಜಿ ಅಕ್ಕಿ ಪಡೆದುಕೊಳ್ಳಿ ಎಂಬ ಕಾರ್ಯಕ್ರಮವನ್ನು ಮಂಗಳವಾರ ನಡೆಸಿದರು. ಈ ಮೂಲಕ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಸದಂತೆ ಹಾಗು ಪ್ಲಾಸ್ಟಿಕ್ ಬಳಸುವುದರಿಂದ ಯಾವ ರೀತಿ ದುಷ್ಪರಿಣಾಮ ಉಂಟಾಗುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸಿದರು.

Creative Awareness Programme Against Plastic In Shivamogga

ಈ ಅಭಿಯಾನ ನಡೆದ ಒಂದೇ ದಿನಕ್ಕೆ ಬರೋಬ್ಬರಿ 150 ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗಿದ್ದು, ಅದಕ್ಕೆ ಪ್ರತಿಯಾಗಿ ಸದಸ್ಯರು 150 ಕೆಜಿ ಅಕ್ಕಿ ನೀಡಿದ್ದಾರೆ. ಹಾಗೆಯೇ ತಮ್ಮ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಮಹಿಳೆಯರು ಗೃಹ ಬಳಕೆಗೆ ಪ್ಲಾಸ್ಟಿಕ್ ಬಳಸುತ್ತಿದ್ದು, ಮಹಿಳಾ ಸಂಘದಿಂದಲೇ ಈ ರೀತಿ ಪ್ರಯತ್ನ ನಡೆದಿರುವುದು ಜನರ ಶ್ಲಾಘನೆಗೂ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+