ಚೀನಾದಿಂದ ಶಿವಮೊಗ್ಗಕ್ಕೆ ಬಂದ ಪ್ರವಾಸಿಗರ ಮೇಲೆ ನಿಗಾ
ಶಿವಮೊಗ್ಗ, ಮಾರ್ಚ್ 04: ಕೊರೊನಾ ವೈರಸ್ ಭೀತಿಯಿಂದ ರಾಜ್ಯಕ್ಕೆ ಬರುವ ಪ್ರವಾಸಿಗರ ಮೇಲೆ ನಿಗಾ ಇಡಲಾಗಿದೆ. ಶಿವಮೊಗ್ಗದಲ್ಲಿ 11 ಪ್ರವಾಸಿಗರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಶಿವಮೊಗ್ಗ ನೋಡಲು ಬಂದ ಪ್ರವಾಸಿಗರನ್ನು ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗುತ್ತಿದೆ. ಆ ವ್ಯಕ್ತಿಗಳಿಗೆ ಜ್ವರ, ಕೆಮ್ಮಿ, ಶೀತ ಹೀಗೆ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಇವೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ.
11 ಜನರ ಪೈಕಿ ನಾಲ್ವರು ಚೀನಾದಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ. ಚೀನಾದಲ್ಲಿಯೇ ಕೊರೊನಾ ವೈರಸ್ ಹೆಚ್ಚಿದ್ದು, ಆ ನಾಲ್ಕು ವ್ಯಕ್ತಿಗಳ ಮೇಲೆ ಹೆಚ್ಚು ನಿಗಾ ಇಟ್ಟಿದ್ದಾರೆ. ಬೇರೆ ಬೇರೆ ಕಡೆಯಿಂದ ಬರುವ ಪ್ರವಾಸಿಗರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ ಅನೇಕ ಪ್ರವಾಸಿ ತಾಣಗಳಲ್ಲಿ ಕೊರೊನಾ ವೈರಸ್ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಹಂಪಿಯಲ್ಲಿಯೂ ವಿದೇಶಿಗರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ.
ದುಬೈನಿಂದ ಬೆಂಗಳೂರಿಗೆ ಬಂದ ವ್ಯಕ್ತಿಯಿಂದಲೇ ಮೊದಲ ಕರ್ನಾಟಕಕ್ಕೆ ಕೊರೊನಾ ವೈರಸ್ ಪತ್ತೆಯಾಗಿತ್ತು. ಮೂಲತಃ ತೆಲಂಗಾಣದವರಾಗಿರುವ ಆ ವ್ಯಕ್ತಿ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications