'ರಾಕ್ಷಸರಿಗೆ ಕೊರೊನಾ ಬರಲ್ಲ, ನನ್ನಂಥವನಿಗಂತೂ ಮೊದಲೇ ಇಲ್ಲ'

ಶಿವಮೊಗ್ಗ, ಮೇ 22: ನಿಮಗೆ ಕೊರೊನಾ ವೈರಸ್ ಬಂದಿದೆಯೇ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಕೆ.ಎಸ್ ಈಶ್ವರಪ್ಪನವರು ರಾಕ್ಷಸರಿಗೆ ಕೊರೊನಾ ವೈರಸ್ ಬರುವುದಿಲ್ಲ, ನನ್ನಂತವನಿಗಂತೂ ಮೊದಲೇ ಬರುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Recommended Video

      ಸಚಿವ ಈಶ್ವರಪ್ಪ ಕಾಲಿಗೆ ಬಿದ್ದ ಶಿವಮೊಗ್ಗ ತಹಶಿಲ್ದಾರ್,ಸಾರ್ವಜನಿಕರಿಂದ ಆಕ್ಷೇಪ | Oneindia Kannada

      ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ""ಕೊರೊನಾ ವೈರಸ್ ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯ ಇರಬೇಕು. ಇದರ ಜೊತೆಗೆ ಜಾಗರೂಕತೆಯೂ ಬೇಕು‌. ಕೊರೊನಾ ವೈರಸ್ ನ ಭಯದಿಂದ ಶಾಸಕರು, ಸಚಿವರು, ಸಂಸದರು ಮನೆಯಲ್ಲೇ ಇದ್ದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುವುದು ಹೇಗೆ? ''ಎಂದು ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದರು.

      ರಾಕ್ಷಸರಿಗೆ ಕೊರೊನಾ ವೈರಸ್ ಬರೋದಿಲ್ಲ. ನನ್ನಗಂತೂ ಸೋಂಕು ಬರಲ್ಲ ಎಂಬ ಅರ್ಥದಲ್ಲಿ ಸಚಿವರು ಹಾಸ್ಯ ಚಟಾಕಿ ಹಾರಿಸಿದ್ದು ವಿಶೇಷವಾಗಿತ್ತು.

      Coronavirus Dont Come To Demons Said By Minister KS Eshwarappa In Shivamogga

      ಇಡೀ ಪ್ರಪಂಚವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಜನ ಲಕ್ಷಾಂತರ ರುಪಾಯಿ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ ಎಂದರು.

      ಕೊರೊನಾ ವೈರಸ್ ವಿರುದ್ಧ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದಾಗಿ ಹೋರಾಟ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹೇಳಿಕೆಯಿಂದ ಎಲ್ಲರಿಗೂ ನೋವಾಗಿದೆ ಎಂದು ತಿಳಿಸಿದರು.

      ಸೋನಿಯಾ ಗಾಂಧಿ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ನಾನು ಹೇಳುವುದಿಲ್ಲ, ಸಾಗರದ ಒಬ್ಬ ವಕೀಲ ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನ್ನ ಕೆಲಸವನ್ನು ತಾನು ಮಾಡಿದ್ದಾನೆ ಎಂದು ಸಮರ್ಥಿಸಿಕೊಂಡರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+