ಶಿವಮೊಗ್ಗ-ಬೆಂಗಳೂರು ರೈಲ್ವೆ ಸಂಚಾರ ರದ್ದು, ವಿವರ

ಶಿವಮೊಗ್ಗ, ಮೇ 17 : ಜೋಡಿ ರೈಲ್ವೆ ಹಳಿ ಕಾಮಗಾರಿ ಹಿನ್ನಲೆಯಲ್ಲಿ ಶಿವಮೊಗ್ಗ-ಬೆಂಗಳೂರು ನಡುವಿನ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಮೇ 22ರಿಂದ 29ರ ತನಕ ರೈಲು ಸಂಚಾರದಲ್ಲಿ ಅಡಚಣೆಯಾಗಲಿದೆ.

ಮೇ 22ರಿಂದ 29ರ ತನಕ ತುಮಕೂರು-ಗುಬ್ಬಿ ಮಾರ್ಗದಲ್ಲಿ ಜೋಡಿ ಹಳಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಹಿನ್ನಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವು ರೈಲುಗಳ ಸಂಚಾರ ರದ್ದುಗೊಂಡಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಮಾಡಲಾಗಿದೆ. ಕೆಲವು ರೈಲುಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ.

train

ರದ್ದಾಗಿರುವ ರೈಲುಗಳು

* ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ (56227) ಮೇ 22 ರಿಂದ 28
* ಶಿವಮೊಗ್ಗ - ಬೆಂಗಳೂರು ಟೌನ್ ಪ್ಯಾಸೆಂಜರ್ (56229) ಮೇ 23 ರಿಂದ 29
* ಹರಿಹರ-ಯಶವಂತಪುರ ಎಕ್ಸ್‌ಪ್ರೆಸ್ (16578) ಮೇ 23, 24,29
* ಯಶವಂತಪುರ-ಹರಿಹರ ಎಕ್ಸ್‌ಪ್ರೆಸ್ (16577) ಮೇ 22, 23, 28
* ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ (20651) ಮೇ 22 ರಿಂದ 28
* ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16579) ಮೇ 25, 26, 27
* ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ (16580) ಮೇ 25, 26, 27
* ಬೆಂಗಳೂರು-ಚಿಕ್ಕಜಾಜೂರು-ಚಿತ್ರದುರ್ಗ ಪ್ಯಾಸೆಂಜರ್ (56519) ಮೇ 23 ರಿಂದ 29
* ಚಿತ್ರದುರ್ಗ-ಹರಿಹರ ಪ್ಯಾಸೆಂಜರ್ (56517) ಮೇ 23 ರಿಂದ 29

ಭಾಗಶಃ ರದ್ದು

* ಚಿಕ್ಕಮಗಳೂರು-ಬೆಂಗಳೂರು ಪ್ಯಾಸೆಂಜರ್ (56277) ಮೇ 23 ರಿಂದ 29. (ಅರಸೀಕೆರೆಯಿಂದ-ಯಶವಂತಪುರದ ತನಕ ಸಂಚಾರ)

* ಬೆಂಗಳೂರು-ಚಿಕ್ಕಮಗಳೂರು (56278) ಮೇ 23 ರಿಂದ 29. (ಯಶವಂತಪುರಿಂದ ಅರಸೀಕೆರೆ ತನಕ ಸಂಚಾರ)

ಸಮಯ ಬದಲಾವಣೆ

* ಹುಬ್ಬಳ್ಳಿ-ಅಶೋಕಪುರಂ ಎಕ್ಸ್‌ಪ್ರೆಸ್ (17325) ಮೇ 22 ರಿಂದ 27 (55 ನಿಮಿಷ ವ್ಯತ್ಯಯ)
* ವೆಲ್ಲಾಂಕಣಿ-ವಾಸ್ಕೋಡಾಗಾಮ ಎಕ್ಸ್‌ಪ್ರೆಸ್ (17316) ಮೇ 21 ರಂದು (45 ನಿಮಿಷ ವ್ಯತ್ಯಯ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+