ಬುರ್ಖಾ ಧರಿಸಿ ಹೊತ್ತೊಯ್ದ ಮಗು ಶಿವಮೊಗ್ಗದಲ್ಲಿ ಪತ್ತೆ
ಬೆಂಗಳೂರು, ಅಕ್ಟೋಬರ್. 08: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಿಂದ ನಾಲ್ಕು ದಿನಗಳ ಹಿಂದೆ ಕಳುವಾಗಿದ್ದ ನವಜಾತ ಗಂಡು ಮಗು ಶಿವಮೊಗ್ಗ ಜಿಲ್ಲೆ ಸಾಗರದ ತಾಲೂಕಿನ ಕಾಗೆಹಳ್ಳಿ ಕಾಗೆಹಳ್ಳಿಯಲ್ಲಿ ಪತ್ತೆಯಾಗಿದೆ. ತಾಯಿ ಮತ್ತು ಮಗುವನ್ನು ಒಂದು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಮಗು ಅಪಹರಣದ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಶಿವಮೊಗ್ಗದ ಸಾಗರ ತಾಲೂಕಿನ ಕಾಗೆಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ. ಮಗುವನ್ನು ಅಪಹರಿಸಿದ್ದ ಜುಬೀನಾ ಹಾಗೂ ಆಕೆಯ ಸಹೋದರ ಖರೀಮ್ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬುರ್ಖಾ ಧರಿಸಿ ಆಸ್ಪತ್ರೆಗೆ ಬಂದಿದ್ದ ಮಹಿಳೆ ತಾಯಿ ಬಳಿ ಪರಿಚಯಸ್ಥರಂತೆ ಮಾತನಾಡಿದ್ದಳು. ತಾಯಿ ಶೌಚಾಲಯಕ್ಕೆ ತೆರಳಿದ್ದಾಗ ಮಗು ಎತ್ತಿಕೊಂಡು ಜುಬೀನಾ ಪರಾರಿಯಾಗಿದ್ದಳು.[ಬುರ್ಖಾ ಧರಿಸಿ ಬಂದವಳು ಗಂಡು ಮಗು ಹೊತ್ತೊಯ್ದಳು!]
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಗು ಶಿವಮೊಗ್ಗದಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ. ಆದರೆ ಸ್ಥಳಕ್ಕೆ ತೆರಳದಿದಾಗ ಆರೋಪಿಗಳಿ ಪರಾರಿಯಾಗಿದ್ದಾರೆ. ಮನೆಯೊಂದರಲ್ಲಿದ್ದ ಮಗುವನ್ನು ರಕ್ಷಣೆ ಮಾಡಿ ತಾಯಿಗೆ ನೀಡಲಾಗಿದ್ದು ಮಗು ಆರೋಗ್ಯವಾಗಿದೆ.












Click it and Unblock the Notifications