ಶಿವಮೊಗ್ಗ: ಕೆಲಸ ಖಾಲಿ ಇದೆ, ಮೇ 19ರೊಳಗೆ ಅರ್ಜಿ ಹಾಕಿ

ಶಿವಮೊಗ್ಗ, ಮೇ 11: ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿಯೊಂದಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಲ್ಪ ಸಂಖ್ಯಾತರ ವಸತಿ ಶಾಲೆ/ ಕಾಲೇಜುಗಳಲ್ಲಿ ವಿವಿಧ ಶಿಕ್ಷಕರ/ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಅರ್ಜಿಗಳನ್ನು ಪಡೆದು ಮೇ 19ರೊಳಗಾಗಿ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ ಕಾಲೇಜುಗಳಿಗೆ ಹಾಗೂ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ.

Apply Guest Teacher And Lecturer Recruitment Shivamogga

ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ತಾಲೂಕು ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಅಥವಾ ವೆಬ್‌ಸೈಟ್ https://dom.karnataka.gov.in ನಲ್ಲಿ ಪಡೆಯಬಹುದು.

ಹುದ್ದೆಗಳ ವಿವರ: ವಸತಿ ಶಾಲೆ/ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ವಿವರ. ಕನ್ನಡ ಭಾಷಾ ಶಿಕ್ಷಕರು 7, ಇಂಗ್ಲೀಷ್ ಭಾಷಾ ಶಿಕ್ಷಕರು 9, ಹಿಂದಿ ಭಾಷಾ ಶಿಕ್ಷಕರು 4, ಉರ್ದು ಭಾಷಾ ಶಿಕ್ಷಕರು 2, ಗಣಿತ ಶಿಕ್ಷಕರು 4, ಸಾಮಾನ್ಯ ವಿಜ್ಞಾನ ಶಿಕ್ಷಕರು 4, ಸಮಾಜ ವಿಜ್ಞಾನ ಶಿಕ್ಷಕರು 8, ಗಣಕಯಂತ್ರ ಶಿಕ್ಷಕರು 2, ದೈಹಿಕ ಶಿಕ್ಷಣ ಶಿಕ್ಷಕರು 2 ಒಟ್ಟು 42 ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ.

ವಸತಿ ಶಾಲೆ/ ಮೌಲಾನಾ ಆಜಾದ್ ಮಾದರಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ವಿವರಗಳು. ಕನ್ನಡ ಭಾಷಾ ಶಿಕ್ಷಕರು 3, ಇಂಗ್ಲೀಷ್ ಭಾಷಾ ಶಿಕ್ಷಕರು 3, ಉರ್ದು ಭಾಷಾ ಶಿಕ್ಷಕರು 3, ಗಣಿತ ಶಿಕ್ಷಕರು 3, ಭೌತಶಾಸ್ತ್ರ ಉಪನ್ಯಾಸಕರು 3, ರಸಾಯನಶಾಸ್ತ್ರ ಉಪನ್ಯಾಸಕರು 3, ಜೀವಶಾಸ್ತ್ರ ಉಪನ್ಯಾಸಕರು 3, ವ್ಯವಹಾರ ಅಧ್ಯಯನ ಉಪನ್ಯಾಸಕರು 1, ಲೆಕ್ಕಶಾಸ್ತ್ರ ಉಪನ್ಯಾಸಕರು 2, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರು 1, ಅರ್ಥಶಾಸ್ತ್ರ ಉಪನ್ಯಾಸಕರು 1, ಇತಿಹಾಸ ಉಪನ್ಯಾಸಕರು 1 ಒಟ್ಟು 27 ಉಪನ್ಯಾಸಕ ಹುದ್ದೆಗಳು.

ಆಸಕ್ತ, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಶಿವಮೊಗ್ಗ 7676888388, ಭದ್ರಾವತಿ 9538853680, ತೀರ್ಥಹಳ್ಳಿ 8861982835, ಸೊರಬ 9513815513, ಶಿಕಾರಿಪುರ 7829136724, ಹೊಸನಗರ 9008447029 ಹಾಗೂ ಸಾಗರ 7338222907 ಸಂಪರ್ಕಿಸುವುದು.

ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್‌) 150 ಮೆಂಟೇನರ್ ಹುದ್ದೆಗಳಿಗಾಗಿ ಐಟಿಐ. ಅಥವಾ ಎನ್‌ಸಿವಿಟಿ/ ಎನ್‌ಸಿಟಿವಿಟಿ/ ಎನ್‌ಎಸಿಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಾಗೂ 50 ವರ್ಷದೊಳಗಿನ ಅರ್ಹ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಹುದ್ದೆಯು 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರವಾಗಿದ್ದು, ನಂತರ ವೈಯಕ್ತಿಕ ಕಾರ್ಯಕ್ಷಮತೆಗೆ ಅನುಗುಣವಾಗಿ ಅವಧಿಯನ್ನು ವಿಸ್ತರಿಸಲಾಗುತ್ತದೆ. ವೇತನ 25,000-59,060 (ವಾರ್ಷಿಕ ಬಡ್ತಿ ಶೇ 3) ಮತ್ತು ಬಿಎಂಆರ್‌ಸಿಎಲ್‌ನ ಓ&ಎಂ ವಿಂಗ್‌ಗೆ ಲಭ್ಯವಿರುವ ಇತರೆ ಭತ್ಯೆಗಳನ್ನು ನೀಡಲಾಗುವುದು.

ಆಸಕ್ತರು ಮೇ 22 ರೊಳಗಾಗಿ ವೆಬ್‌ಸೈಟ್ www.bmrc.co.in/careers ನಲ್ಲಿ ಅರ್ಜಿಗಳನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ [email protected] ಅನ್ನು ಸಂಪರ್ಕಿಸುವಂತೆ ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+