ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆರಡು ಕೆಎಫ್ ಡಿ ಪ್ರಕರಣ ದಾಖಲು
ಶಿವಮೊಗ್ಗ, ಏಪ್ರಿಲ್ 15: ಕೊರೊನಾ ವೈರಸ್ ಸೋಂಕು ಬಾಧಿಸುತ್ತಿರುವ ಸಂದರ್ಭದಲ್ಲಿಯೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮೀಣ ಭಾಗದ ಇಬ್ಬರು ಮಹಿಳೆಯರಿಗೆ ಮಂಗನ ಕಾಯಿಲೆ (ಕೆಎಫ್ ಡಿ) ಪಾಸಿಟಿವ್ ಇರುವ ವರದಿ ಬಂದಿದೆ.
ಮಂಗನ ಕಾಯಲೆ ಬಂದಿರುವ ಒಬ್ಬರು ಶಿವಮೊಗ್ಗ ಜಿಲ್ಲೆಯ ಕೋಣಂದೂರು ಮತ್ತು ಇನ್ನೋರ್ವರು ಗುಡ್ಡೇಕೊಪ್ಪದ ನಿವಾಸಿಗಳೆಂದು ತಿಳಿದುಬಂದಿದೆ.
ಇಂದು ಕೋಣಂದೂರು ಮತ್ತು ಗುಡ್ಡೇಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರವೆಂದು ತೋರಿಸಿಕೊಳ್ಳಲು ಬಂದ ಮಹಿಳೆಯರಿಂದ ರಕ್ತದ ಪರೀಕ್ಷೆಯನ್ನು ಮಾಡಲಾಗಿದೆ.

ರಕ್ತದ ಪರೀಕ್ಷೆಯಲ್ಲಿ ಮಂಗನ ಕಾಯಿಲೆ(ಕೆಎಫ್ ಡಿ) ಪಾಸಿಟಿವ್ ಕಂಡುಬಂದಿದ್ದು, ಇವರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಇದರಿಂದಾಗಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೆಎಫ್ ಡಿ ಪಾಸಿಟಿವ್ ಇರುವವರ ಸಂಖ್ಯೆ 120 ದಾಟಿದೆ.












Click it and Unblock the Notifications