ಸೊರಬದಲ್ಲಿ ಅಮರಜ್ಯೋತಿ ಶಾಲೆ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆ

ಸೊರಬ, ಅಕ್ಟೋಬರ್ 17: ಶಾಲೆಗೆ ಹೋಗುವುದಾಗಿ ಹೇಳಿ ಹೊರಟ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸೊರಬದಲ್ಲಿ ನಡೆದಿದೆ. ಪಟ್ಟಣದ ಹೊರವಲಯದ ಅಮರಜ್ಯೋತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅನುಷಾ ವಾಸ್ (14) ನಾಪತ್ತೆಯಾದ ವಿದ್ಯಾರ್ಥಿನಿ.

ಅನುಷಾ ಮೂಲತಃ ಸಾಗರದ ಎನ್‌ಎನ್ ನಗರದ ನಿವಾಸಿ. ದಸರಾ ರಜೆ ಮುಗಿಸಿ ಶಾಲೆಗೆ ತೆರಳುವುದಾಗಿ ತಿಳಿಸಿದ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿದ್ದು, ಆಕೆಯ ತಾಯಿ ಮರಿಯಾವಾಸ್ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮರಜ್ಯೋತಿ ಸಹ ಶೈಕ್ಷಣಿಕ ಸಂಸ್ಥೆಗಳ ಅಡಿಯಲ್ಲಿ ಅಮರಜ್ಯೋತಿ ಸಂಯುಕ್ತ ಪದವಿ ಕಾಲೇಜು, ಅಮರ ಜ್ಯೋತಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಒಂದೇ ಆವರಣದಲ್ಲಿದ್ದು, ವಿದ್ಯಾರ್ಥಿನಿಯರಿಗೆ ಮರಿಯಾ ಬೋರ್ಡಿಂಗ್ ವಿದ್ಯಾರ್ಥಿನಿಯರ ನಿಲಯದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 80 ವಿದ್ಯಾರ್ಥಿನಿಯರು ಈ ವಸತಿ ನಿಲಯದಲ್ಲಿ ತಂಗಿದ್ದಾರೆ. ಹಾಸ್ಟೆಲ್ ‌ನ ಸಿಸ್ಟರ್ ಹಿಲ್ಡಗಾರ್ಡ್ ‌ಗೆ ತಮ್ಮ ಮಗಳು ಬಂದಿರುವುದನ್ನು ದೃಢಪಡಿಸಿಕೊಳ್ಳಲು ಕರೆ ಮಾಡಿದಾಗ ಅನುಷಾ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

Amarajyoti School Student Anusha Missing In Soraba

ವಿಷಯ ತಿಳಿಯುತ್ತಿದ್ದಂತೆ ಪೋಷಕರು ಆತಂಕಗೊಂಡಿದ್ದಾರೆ. ವಿದ್ಯಾರ್ಥಿನಿ ಅನುಷಾ ಪತ್ತೆ ಮಾಡಲು ಪೊಲೀಸರು ತಂಡ ರಚಿಸಿ, ಅನುಷಾ ಸಾಗರದಿಂದ ಸೊರಬಕ್ಕೆ ಆಗಮಿಸಿದ ಬಸ್, ಬಸ್ ನಿಲ್ದಾಣದ ಸಿಸಿ ಕ್ಯಾಮೆರಾಗಳು ಹಾಗೂ ಆಟೋ ನಿಲ್ದಾಣ ಮತ್ತು ಶಾಲೆಯಲ್ಲಿಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+