• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ 3 ಅವಕಾಶಗಳಿದ್ದವು: ತೀರ್ಥಹಳ್ಳಿಯಲ್ಲಿ ಸಿಎಂ ಆಕ್ರೋಶ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್‌, 28: ಜನರ ಬದುಕಿನ ವಿಚಾರ ಬಂದಾಗ ಎಲ್ಲರೂ ಒಗ್ಗೂಡಬೇಕು. ಇಲ್ಲಿ ರಾಜಕೀಯ ಮಾಡಬಾರದು. 60 ವರ್ಷವಾದರೂ ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ಹಿಂದಿನ ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂಬ ನೋವು ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಥಹಳ್ಳಿಯಲ್ಲಿ ತಿಳಿಸಿದರು.

ಎಲೆ ಚುಕ್ಕೆ ರೋಗ: ತೀರ್ಥಹಳ್ಳಿಯ ಅಡಿಕೆ ತೋಟಕ್ಕೆ ಭೇಟಿ ನೀಡಿದ ಸಿಎಂ, ಪ್ರಮುಖಾಂಗಳು ಇಲ್ಲಿವೆಎಲೆ ಚುಕ್ಕೆ ರೋಗ: ತೀರ್ಥಹಳ್ಳಿಯ ಅಡಿಕೆ ತೋಟಕ್ಕೆ ಭೇಟಿ ನೀಡಿದ ಸಿಎಂ, ಪ್ರಮುಖಾಂಗಳು ಇಲ್ಲಿವೆ

ತೀರ್ಥಹಳ್ಳಿಯಲ್ಲಿ ಶಾಸಕ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ವೇದಿಕೆಯ ಮನವಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು, ಅಧಿಕಾರ ಬರುತ್ತದೆ ಹೋಗುತ್ತದೆ. ನಮ್ಮ ವಿರುದ್ಧ ಹಲವರು ಮಾತನಾಡುತ್ತಿದ್ದಾರೆ. ಮಾತನಾಡುವವರೆಲ್ಲ ಕೆಲಸ ಮಾಡಿದ್ದರೆ ಇವತ್ತು ಹೋರಾಟ, ಪಾದಯಾತ್ರೆಯ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು. ಅಲ್ಲದೆ ಈ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ. ಅರಣ್ಯ ಖಾತೆ ಸಚಿವರೊಂದಿಗೆ ಚರ್ಚೆ ನಡೆಸಿ, ಶೀಘ್ರದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡರು.

ಪರಿಹಾರ ನೀಡಲು ಇದ್ದ ಅವಕಾಶಗಳು
ಶರಾವತಿ ಯೋಜನೆ ಆಗಿದ್ದು 1978ರಲ್ಲಿ. ಅದಾದ ಬಳಿಕ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿತ್ತು. ಆಗಲೇ ಯೋಜನೆಗೆ ಜಾಗ ಬಿಟ್ಟುಕೊಟ್ಟವರಿಗೆ ಪರಿಹಾರ ನೀಡಲು ಅವಕಾಶವಿತ್ತು ಎಂದು ಸಿಎಂ ತಿಳಿಸಿದರು. 1978ಕ್ಕಿಂತಲೂ ಮೊದಲು ಮೀಸಲು ಅರಣ್ಯ ಯಾವುದು, ವನ್ಯಜೀವಿ ಅರಣ್ಯ ಯಾವುದು ಅನ್ನುವುದರ ಮಾಹಿತಿಯನ್ನು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಸರ್ವೇ ಮಾಡಿದಾಗ ಶರಾವತಿ ಯೋಜನೆಗೆ ಜಾಗ ಬಿಟ್ಟುಕೊಟ್ಟವರ ಬಳಿ ಇರುವ ಜಾಗ ಹೊರತು, ಉಳಿದ ಜಾಗವನ್ನು ಅರಣ್ಯ ಎಂದು ಘೋಷಿಸಲು ಅವಕಾಶವಿತ್ತು.1978ರಿಂದ 1980ರವರೆಗೆ ಮರು ಸರ್ವೆಗೆ ಅವಕಾಶವಿತ್ತು. ಆಗಲೂ ಶರಾವತಿ ಸಂತ್ರಸ್ಥರಿಗೆ ಜಮೀನು ಕೊಡಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

3 opportunities to solve problem of Sharavati victims: CM outrage in Thirthahalli

ನಮ್ಮ ತಲೆಗೆ ಕಟ್ಟಲು ನೋಡುತ್ತಿದ್ದಾರೆ
ಇನ್ನು ಶಾಸಕ ಹರತಾಳು ಹಾಲಪ್ಪ ಅವರು ಮಾತನಾಡಿದ್ದು, ಶರಾವತಿ ಸಂತ್ರಸ್ಥರು ನೆಲೆ ಕಂಡುಕೊಂಡಿರುವ ಭೂಮಿಯ ವಿಚಾರವಾಗಿ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯಿಂದ ಸರ್ವೇಗೆ ಅದೇಶ ಕೊಡಬೇಕು. 60 ವರ್ಷದ ಸಮಸ್ಯೆಗೆ ಮುಕ್ತಿ ನೀಡಬೇಕು. ಈ ಸಮಸ್ಯೆಗೆ ಯಡಿಯೂರಪ್ಪ, ರಾಘವೇಂದ್ರ ಮತ್ತು ಈಗಿನ ಸರ್ಕಾರ ಕಾರಣವಲ್ಲ. ಇದು ಹಿಂದಿನ ಸರ್ಕಾರದ ಪಾಪದ ಕೂಸಾಗಿದೆ. ಅದನ್ನು ನಮ್ಮ ತಲೆಗೆ ಕಟ್ಟಲು ಪ್ರಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ 24 ಸಾವಿರ ಹೆಕ್ಟೇರ್‌ನಲ್ಲಿ ನಾವು ವಾಸವಾಗಿದ್ದೇವೆ. ಅದು ಅರಣ್ಯವೋ, ಗೋಮಾಳವೋ, ಗ್ರಾಮ ಠಾಣವೋ ಗೊತ್ತಿಲ್ಲ. ಕೇಂದ್ರ ಸರ್ಕಾರದವರೆಗೆ ಈ ವಿಚಾರ ಕೊಂಡೊಯ್ದು ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಹರತಾಳು ಹಾಲಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಸ್ವಾಮಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಸವರಾಜ ಬೊಮ್ಮಾಯಿ
Know all about
ಬಸವರಾಜ ಬೊಮ್ಮಾಯಿ
English summary
Chief Minister Basavaraj Bommai expressed outrage at Tirthahalli, 3 opportunities for solving problem of Sharavati backwater victims. And Congress government is responsible for problems. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X