ಶಿವಮೊಗ್ಗದಲ್ಲಿ 2 ಕೊರೊನಾ ಶಂಕಿತ ಪ್ರಕರಣಗಳು ಪತ್ತೆ?

ಶಿವಮೊಗ್ಗ, ಮಾರ್ಚ್ 19: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಐಸೋಲೇಷನ್ ವಾರ್ಡ್ ನಲ್ಲಿ ಇಬ್ಬರು ಮಕ್ಕಳಲ್ಲಿ ಕೊರೊನಾ ವೈರಸ್ ಇರುವ ಶಂಕೆ ಹಿನ್ನೆಲೆಯಲ್ಲಿ ದಾಖಲಿಸಲಾಗಿದೆ.

ಶಿವಮೊಗ್ಗ ನಗರದ 11 ವರ್ಷದ ಹೆಣ್ಣು ಮಗುವಿಗೆ ಐಸೋಲೇಷನ್ ನಲ್ಲಿ ನಿಗಾ ಇಡಲಾಗಿದ್ದು, ಈ ಮಗು ಪಾಲಕರೊಂದಿಗೆ 9 ದಿನದ ಹಿಂದೆ ಮೆಕ್ಕಾಗೆ ಹೋಗಿ ಬಂದಿತ್ತು. ಈ ಮಗುವಿನಲ್ಲಿ ಕೊರೊನಾ ವೈರಸ್ ಲಕ್ಷಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಿಗಾ ವಹಿಸಲಾಗಿದೆ.

ಬಿಹಾರ ಮೂಲದ 11 ತಿಂಗಳ ಮಗುವಿನಲ್ಲೂ ಕೊರೊನಾ ವೈರಸ್ ಲಕ್ಷಣ ಈ ಮಗುವಿನ ಪಾಲಕರು ಕನ್ಸ್ ಸ್ಟ್ರಕ್ಷನ್ ಕೆಲಸಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಈ ಮಗುವಿನಲ್ಲೂ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕೊರೊನಾ ವಾರ್ಡ್ ನಲ್ಲಿ ನಿಗಾದಲ್ಲಿಡಲಾಗಿದೆ.

2 Corona Suspected Cases Detected In Shivamogga

ಈ ಮಗುವಿನ ಪಾಲಕರು ಕೊರೊನಾ ಪೀಡಿದ ರಾಜ್ಯಗಳಲ್ಲಿ ಓಡಾಡಿರುವುದರಿಂದ ಪಾಲಕರನ್ನೂ ಐಸೋಲೇಷನ್ ನಲ್ಲಿ ಇಡಲಾಗಿದೆ. ಇಬ್ಬರು ಮಕ್ಕಳ ರಿಪೋರ್ಟ್ ಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+