Sedam Elections: ಪಾಟೀಲರ ನಡುವಿನ ಗುದ್ದಾಟದಲ್ಲಿ 'ಗುತ್ತೇದಾರ' ಎಂಟ್ರಿ- ರಂಗೇರಿದ ಅಖಾಡ

ಕಲಬುರಗಿ, ಮಾರ್ಚ್‌ 24: ಸೇಡಂ ಅಸೆಂಬ್ಲಿ ಕ್ಷೇತ್ರವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಲಬುರಗಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಕ್ಷೇತ್ರವು 1951ರಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಇದು ಸಾಮಾನ್ಯ ವರ್ಗದ ವಿಧಾನಸಭಾ ಕ್ಷೇತ್ರವಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.

ಸೇಡಂ ಅಸೆಂಬ್ಲಿ ಕ್ಷೇತ್ರದಲ್ಲಿ SC ಮತದಾರರು ಸರಿಸುಮಾರು 58,350 ಆಗಿದ್ದು, ಜನಗಣತಿಯ ಪ್ರಕಾರ ಶೇ 26.97 ರಷ್ಟಿದ್ದಾರೆ.

Sedum Constituency Map

ಸೇಡಂ ಅಸೆಂಬ್ಲಿ ಕ್ಷೇತ್ರದಲ್ಲಿ ST ಮತದಾರರು ಸರಿಸುಮಾರು 5,928 ರಷ್ಟಿದೆ. ಇದು ಜನಗಣತಿಯ ಪ್ರಕಾರ, ಶೇ 2.74 ರಷ್ಟಾಗಿದೆ.

ಸೇಡಂ ಅಸೆಂಬ್ಲಿ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸರಿ ಸುಮಾರು 35,915 ಇದ್ದಾರೆ, ಇದು ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ 16.6 ರಷ್ಟಾಗಿದೆ.

ಸೇಡಂ ಅಸೆಂಬ್ಲಿ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಮತದಾರರು ಸರಿ ಸುಮಾರು 179,876 ರಷ್ಟಿದ್ದಾರೆ. ಜನಗಣತಿಯ ಪ್ರಕಾರ, ಇದು ಶೇ 83.14 ರಷ್ಟಾಗಿದೆ.

ಸೇಡಂ ಅಸೆಂಬ್ಲಿ ಕ್ಷೇತ್ರದಲ್ಲಿ ನಗರ ಮತದಾರರು ಸರಿ ಸುಮಾರು 36,499 ರಷ್ಟಿದ್ದಾರೆ. ಇದು ಜನಗಣತಿಯ ಪ್ರಕಾರ ಸುಮಾರು ಶೇ 16.87 ರಷ್ಟಿದೆ.

2019 ರ ಲೋಕಸಭಾ ಚುನಾವಣೆಯಂತೆ ಸೇಡಂ ಅಸೆಂಬ್ಲಿ ಕ್ಷೇತ್ರದಲ್ಲಿ ಒಟ್ಟು ಮತದಾರರು 2, 16, 353 ರಷ್ಟಿದ್ದಾರೆ.

2019 ರ ಲೋಕಸಭಾ ಚುನಾವಣೆಯಂತೆ ಸೇಡಂ ಅಸೆಂಬ್ಲಿ ಕ್ಷೇತ್ರದ ಮತಗಟ್ಟೆಗಳ ಸಂಖ್ಯೆ 260 ರಷ್ಟಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಸೇಡಂ ಅಸೆಂಬ್ಲಿಯಲ್ಲಿ ಮತದಾರರ ಮತದಾನ ಶೇ 68.7 ರಷ್ಟಾಗಿದೆ.

2018 ರ ಅಸೆಂಬ್ಲಿ ಕ್ಷೇತ್ರದ ಚುನಾವಣೆಯಲ್ಲಿ ಸೇಡಂ ಅಸೆಂಬ್ಲಿಯ ಮತದಾರರ ಮತದಾನ ಶೇ 73.75 ರಷ್ಟಾಗಿದೆ.

ಇಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯವಿದ್ದರೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಭಾರಿಸಿದೆ. 2004, 2008 ಹಾಗೂ 2013ರಲ್ಲಿ ಶರಣ ಪ್ರಕಾಶ್ ಪಾಟೀಲ್ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಅವರ ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್‌ ಭಾರಿಸಿದ್ದಾರೆ. 2018ರಲ್ಲಿ ಸೇಡಂನಿಂದ ರಾಜಕುಮಾರ್ ಪಾಟೀಲ್‌ ಅವರು ಆಯ್ಕೆಯಾಗಿದ್ದಾರೆ.

ಸತತ ಮೂರು ಬಾರಿ ಆಯ್ಕೆಯಾಗಿರುವ ಡಾ. ಶರಣಪ್ರಕಾಶ ಪಾಟೀಲ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಅವರಿಗೇ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ. ಅವರು ಸೇಡಂ ತಾಲ್ಲೂಕಿನ ಗ್ರಾಮಗಳಿಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ. ಈಗಾಗಲೇ ಎರಡೆರಡು ಜನಜಾಗೃತಿ ಯಾತ್ರೆ ಮಾಡಿದ್ದಾರೆ. ಈಗ ಮೂರನೇ ಹಂತದ ಯಾತ್ರೆಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ 150 ಗ್ರಾಮಗಳು ಬರುತ್ತವೆ. ಅವುಗಳ ಪೈಕಿ 70 ಗ್ರಾಮಗಳಿಗೆ ಭೇಟಿ ನೀಡಿ, ಜನರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಬಾರಿಯೂ ಬಿಜೆಪಿಯಿಂದ ರಾಜಕುಮಾರ್‌ ಪಾಟೀಲ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‌ನಿಂದ ಡಾ ಶರಣ ಪ್ರಕಾಶ ಪಾಟೀಲರಿಗೆ ಟಿಕೆಟ್‌ ಸಿಗುವುದು ಖಚಿತವಾಗಿದೆ. ಈ ಕ್ಷೇತ್ರದಿಂದ ಅವರೊಬ್ಬರೇ ಅರ್ಜಿ ಹಾಕಿದ್ದಾರೆ. ಇನ್ನು ಜೆಡಿಎಸ್‌ನಿಂದ ಬಾಲರಾಜ ಗುತ್ತೇದಾರ ಅವರು ಕಣಕ್ಕಿಳಿಯಲಿದ್ದಾರೆ. ಹೀಗಾಗಿ, ಈ ಬಾರಿಯ ಚುನಾವಣೆಯು ಸೇಡಂ ಕ್ಷೇತ್ರದಲ್ಲಿ ರಂಗೇರಲಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+