ರಾಂಚಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ರಾಂಚಿ, ಜನವರಿ 8: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಎರಡು ದಿನಗಳ ಕಾಲ ಸತತ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್‌ನ ಚಕ್ರಧರ್‌ಪುರ ದಲ್ಲಿ ನಡೆದಿದೆ.

ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ 20 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಸಂತ್ರಸ್ತೆಯು ಒಡಿಶಾದ ರೌರ್ಕೆಲಾ ಮೂಲದವಳಾಗಿದ್ದಾಳೆ. ಆಕೆಯ ಸಹೋದರನ ಸ್ನೇಹಿತ ಆಕೆಯನ್ನು ಅಪಹರಿಸಿ ಅಲ್ಲಿನ ಲೋಟಪಹಾರ್ ಪ್ರದೇಶಕ್ಕೆ ಕರೆದೊಯ್ದು ಒಂದು ಮನೆಯಲ್ಲಿ ಕೂಡಿಹಾಕಿ ಆರು ಮಂದಿ ಸೇರಿ ನಿರಂತರ ಎರಡು ದಿನಗಳ ಕಾಲ ಅತ್ಯಾಚಾರ ನಡೆಸಿದ್ದಾರೆ.

ಬಳಿಕ ವಿದ್ಯಾರ್ಥಿನಿಯನ್ನು ಕಾಡಿನಲ್ಲಿ ಎಸೆದು ಪರಾರಿಯಾಗಿದ್ದಾರೆ. ಸಂತ್ರಸ್ತೆಯು ತನ್ನ ಮನೆಗೆ ತೆರಳಲು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದಳು, ಆ ಸಂದರ್ಭದಲ್ಲಿ ಸಹೋದರನ ಸ್ನೇಹಿತ ಸಂತ್ರಸ್ತೆಯನ್ನು ಭೇಟಿಯಾಗಿ ಮಾತನಾಡಿಸಿ ಮನೆಗೆ ಹೋಗಲು ತನ್ನೊಂದಿಗೆ ಬೇರೆ ರೈಲು ಹತ್ತುವಂತೆ ತಿಳಿಸಿದ್ದ, ಆಕೆ ಅವನ ಜೊತೆಗೆ ರೈಲು ಹತ್ತಿದ್ದಾಳೆ.

Odisha engineering student gangraped by 6 men in Jharkhand

ಆದರೆ ಆ ರೈಲು ಹೋಗುತ್ತಿರುವುದು ತನ್ನ ಮನೆಯ ಕಡೆಗಲ್ಲ ಎಂಬುದು ಆಕೆಗೆ ಗೊತ್ತಾಗಿದೆ. ಜಾರ್ಕಂಡ್‌ನ ಲೋಟಪಹಾರ್‌ನಲ್ಲಿ ಇಳಿದು ಅಲ್ಲಿಂದ ಬಸ್‌ಗೆ ಹೋಗಬೇಕು ಎಂದು ಆತಹೇಳಿದ್ದ, ಬಳಿಕ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿಯೇ ಆಕೆಯನ್ನು ಕೂಡಿಹಾಕಿ ಅತ್ಯಾಚಾರ ವೆಸಗಿದ್ದಾರೆ. ಬಳಿಕ ಸಂತ್ರಸ್ತೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+