BREAKING: ಸೋನಾಲಿ ಫೋಗಟ್ ಸ್ನಾನಗೃಹದಲ್ಲಿ ಡ್ರಗ್ಸ್ ಪತ್ತೆ- ಗೋವಾ ಕ್ಲಬ್ ಮಾಲೀಕ ಅರೆಸ್ಟ್

ರಾಂಚಿ ಆಗಸ್ಟ್ 27: ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲಬ್ ಮಾಲೀಕ ಮತ್ತು ಡ್ರಗ್ ದಂಧೆಕೋರ ಸೇರಿದಂತೆ ಮತ್ತಿಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಕ್ಲಬ್‌ನ ವಾಶ್‌ರೂಮ್‌ನಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

"ಕ್ಲಬ್‌ನಿಂದ ಡ್ರಗ್ಸ್ ವಶಪಡಿಸಿಕೊಂಡ ಕಾರಣ ಮಾಲೀಕರನ್ನು ಬಂಧಿಸಲಾಗಿದೆ. ಗೋವಾ ಕ್ಲಬ್ ಮಾಲೀಕನ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್‌ನ ಸ್ವರೂಪ ಇನ್ನೂ ದೃಢಪಡಿಸಲಾಗಿಲ್ಲ. ಅದರ ಮಾದರಿಯನ್ನು ಲ್ಯಾಬ್ ವರದಿ ದೃಢೀಕರಿಸುತ್ತದೆ" ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ, ಸೋನಾಲಿ ಫೋಗಟ್ ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಗೋವಾ ಪೊಲೀಸರು ಹೇಳಿದ್ದರು ಮತ್ತು ಬಿಜೆಪಿ ನಾಯಕಿ ಪಬ್‌ನೊಳಗೆ ಕುಂಟುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಾಲಿ ಫೋಗಟ್ ಅವರ ಇಬ್ಬರು ಸಹಾಯಕರಾದ ಸುಧೀರ್ ಸಾಂಗ್ವಾನ್ ಮತ್ತು ಸುಖವಿಂದರ್ ವಾಸಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

BREAKING: Drugs found in Sonali Phogats bathroom- Goa club owner arrested

ಭಾರತದಲ್ಲಿ ಈಗ ನಿಷೇಧಿಸಲಾದ ಜನಪ್ರಿಯ ಕಿರು-ರೂಪದ ವಿಡಿಯೊ ಹೋಸ್ಟಿಂಗ್ ಸೇವೆಯಾದ ಟಿಕ್‌ಟಾಕ್‌ನಲ್ಲಿ ಖ್ಯಾತಿಯನ್ನು ಪಡೆದ ಫೋಗಟ್ ಅವರನ್ನು ಆಗಸ್ಟ್ 23 ರಂದು ಬೆಳಿಗ್ಗೆ ಉತ್ತರ ಗೋವಾ ಜಿಲ್ಲೆಯ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಗೆ ತನ್ನ ಹೋಟೆಲ್‌ನಿಂದ ಕರೆತರಲಾಯಿತು. ಪ್ರಾಥಮಿಕ ದೃಷ್ಟಿಯಲ್ಲಿ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದರು. ಆದರೆ ಫೋಗಟ್ ಅವರ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+