ಶೇಕಡವಾರು ಮತಗಳಿಕೆಯಲ್ಲಿ ಮಾತ್ರ ಬಿಜೆಪಿ 2014-2019ರಲ್ಲಿ ಮೇಲುಗೈ

ರಾಂಚಿ, ಡಿಸೆಂಬರ್ 23: ಬಹುನಿರೀಕ್ಷಿತ ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಸೋಮವಾರ(ಡಿಸೆಂಬರ್ 23) ದಂದು ಪ್ರಕಟಗೊಂಡಿದೆ. ಅಂತಿಮ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಬೇಕಿದ್ದು, ಸದ್ಯದ ಟ್ರೆಂಡ್ ಆಧಾರದ ಮೇಲೆ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟವು ಅಧಿಕಾರ ಸ್ಥಾಪನೆಗೆ ಅರ್ಹತೆ ಪಡೆದುಕೊಂಡಿವೆ.

81 ವಿಧಾನಸಭಾ ಸ್ಥಾನಗಳುಳ್ಳ ಜಾರ್ಖಂಡ್ ನಲ್ಲಿ ಸರ್ಕಾರ ಸ್ಥಾಪನೆಗೆ 41 ಸ್ಥಾನಗಳನ್ನು ಗೆಲ್ಲಲೇಬೇಕು. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೂ, ಮಿತ್ರಪಕ್ಷಗಳಿಂದ ಸೂಕ್ತ ಬೆಂಬಲ ಸಿಗದೆ ಅಧಿಕಾರದಿಂದ ವಂಚಿತವಾಗುವ ಸಾಧ್ಯತೆ ಹೆಚ್ಚಿದೆ. ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳ ಪೈಕಿ ಬಿಜೆಪಿ 33.55% ಗಳಿಸಿದ್ದರೆ, ಜೆಡಿಯು 0.79%, ಎಲ್ ಜೆಪಿ 0.27% ಗಳಿಸಿವೆ. ಎಜೆಎಸ್ ಯುಪಿ: 8.14% ಗಳಿಸಿದೆ. ನೋಟಾ 1.46% ಬಂದಿದೆ. 2014ರಲ್ಲಿ ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಪ್ಲಸ್ ಏಜೆ ಎಸ್ ಯು= 35% ಹಾಗೂ ಬಿಜೆಪಿ: 31.26% ಗಳಿಸಿತ್ತು.

ಸದ್ಯದ ಟ್ರೆಂಡ್ ನಂತೆ(ಸಮಯ 17.25) ಬಿಜೆಪಿ 28, ಜೆಎಂಎಂ 28, ಕಾಂಗ್ರೆಸ್ 14, ಏಜೆಎಸ್ ಯು 3, ಜೆವಿಎಂ 3, ಇತರೆ 7ರಲ್ಲಿ ಮುನ್ನಡೆ ಪಡೆದುಕೊಂಡಿವೆ. ಕಾಂಗ್ರೆಸ್ ಪ್ಲಸ್ 45, ಬಿಜೆಪಿ 26 ಸ್ಥಾನ ಖಾತ್ರಿ ಪಡಿಸಿಕೊಂಡಿವೆ. ಅಂತಿಮ ಫಲಿತಾಂಶದಲ್ಲಿ ಮಹಾ ಘಟಬಂಧನ್ ಸಂಖ್ಯೆ 40ಕ್ಕಿಂತ ಕಡಿಮೆಯಾದರೆ ಬಿಜೆಪಿ ಸರ್ಕಾರ ರಚನೆ ಬಗ್ಗೆ ಕಾರ್ಯತಂತ್ರ ರೂಪಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.

BJP’s vote share is up since 2014, but its down in the number of seats at Jharkhand

ಜಾರ್ಖಂಡ್ ನಲ್ಲಿ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆದು, ನವೆಂಬರ್ 30ರಿಂದ ಡಿಸೆಂಬರ್ 20 ರ ತನಕ ಮತದಾನವಾಗಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಹೊರಬರಲಿದೆ.

ಶೇಕಡವಾರು ಮತಗಳಿಕೆ
ಎಎಎಪಿ: 0.25%
ಎಐಎಫ್ ಬಿ: 0.04%
ಎಐಎಂಐಎಂ: 1.07%
ಎಐಟಿಸಿ: 0.31%
ಎಜೆಎಸ್ ಯುಪಿ: 8.14%
ಬಿಜೆಪಿ: 33.55%
ಬಿಎಲ್ ಎಸ್ ಪಿ: 0.01%
ಸಿಪಿಐ: 0.46%
ಸಿಪಿಐಎಂ: 0.32%
ಐಎನ್ ಸಿ: 13.80%
ಐಯುಎಂಎಲ್: 0.02%
ಜೆಡಿಎಸ್: 0.01%
ಜೆಡಿಯು: 0.79%
ಜೆಎಂಎಂ: 19.24%
ಜೆವಿಎಂ: 5.20%
ಎಲ್ ಜೆಪಿ: 0.27%
ಎನ್ ಸಿಪಿ: 0.48%
ನೋಟಾ: 1.39%
ಎನ್ ಪಿ ಇಪಿ: 0.01%
ಆರ್ ಜೆಡಿ: 2.83%
ಎಸ್ ಎಚ್ಎಸ್: 0.09%
ಎಸ್ ಪಿ: 0.10%
ಇತರೆ: 10.23%

2014ರ ಫಲಿತಾಂಶ: 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ಕಾಂಗ್ರೆಸ್ 6 ಸ್ಥಾನ ಹಾಗೂ ಮಿಕ್ಕ 38 ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಗೆಲ್ಲುವಲ್ಲಿ ಸಫಲವಾಗಿದ್ದವು. ವಿಧಾನಸಭೆ 81 ಸ್ಥಾನಗಳನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ 41.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+