• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾರ್ಖಂಡ್ ಬುಡಕಟ್ಟು ಪ್ರದೇಶಗಳ ಮತಕ್ಕೆ ಕೈ ಹಾಕಿದ ಕಾಂಗ್ರೆಸ್ ಮೈತ್ರಿಕೂಟ

|

ರಾಂಚಿ, ಡಿಸೆಂಬರ್ 23: ಜಾರ್ಖಂಡ್ ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು, ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆದಿದೆ. ಶೇ. 65.17 ರಷ್ಟು ಮತದಾನ ನಡೆದಿತ್ತು. ಇಂದು ಫಲಿತಾಂಶವೂ ಕೂಡಾ ಪ್ರಕಟಗೊಂಡಿದೆ.

ಜಾರ್ಖಂಡ್ 81 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯ. ಅದರಲ್ಲಿ 40 ಕ್ಷೇತ್ರಗಳು ಬುಡಕಟ್ಟು ಜನಾಂಗ, ಯಾದವ ಮತ್ತು ಮುಸ್ಲಿಂ ಸಮುದಾಯದ ಮತಗಳು ಪ್ರಾಬಲ್ಯವಿರುವ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಇವರೇ ನಿರ್ಣಾಯಕರಾಗಿದ್ದಾರೆ.

ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ: BJPಗೆ ಸೋಲು, ಕಾಂಗ್ರೆಸ್ ಮೈತ್ರಿಗೆ ಜಯ

ಬುಡಕಟ್ಟು ಜನಾಂಗ, ಯಾದವ ಮತ್ತು ಮುಸ್ಲಿಂ ಬಾಹುಳ್ಯವಿರುವ 40 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳಾದ ಜೆಎಂಎಂ-ಕಾಂಗ್ರೆಸ್-ಆರ್ ಜೆಡಿ ಪಕ್ಷಗಳು ಮುನ್ನಡೆ ಸಾಧಿಸಿವೆ.

ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಆರ್ ಜೆಡಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಬಿಜೆಪಿ ಆಡಳಿತ ಪಕ್ಷವಾಗಿದ್ದು, ಬುಡಕಟ್ಟು ಜನಾಂಗ ಮತ್ತು ಯಾದವ ಮತಗಳು ಕೈತಪ್ಪಿ ಹೋಗುವ ಭೀತಿಯಲ್ಲಿದೆ.

ಜಾರ್ಖಂಡ್: ಜೆಎಂಎಂ ಸಿಎಂ ಅಭ್ಯರ್ಥಿ ಹೇಮಂತ್ ಮುನ್ನಡೆ

40 ಕ್ಷೇತ್ರಗಳಲ್ಲಿ ಮುನ್ನಡೆ ಬರುವ ಭರವಸೆಯಲ್ಲಿರುವ ಕಾಂಗ್ರೆಸ್-ಜೆಎಂಎಂ ಮೈತ್ರಿ ಪಕ್ಷ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಮೈತ್ರಿ ಪಕ್ಷ ಗೆದ್ದರೆ ಹೇಮಂತ್ ಸೂರೇನ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

English summary
State of Jharkhand 81 Assembly constituencies. There are 40 constituencies which are dominated by tribal, Yadava and Muslim community votes. They are crucial in these areas. In most of these 41 seats the JMM-Cong-RJD alliance is leading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X