ವಿಡಿಯೋ; ವಿಶಿಷ್ಟವಾಗಿ ನಿವೃತ್ತ ಸರ್ಕಾರಿ ಅಧಿಕಾರಿ ಹುಟ್ಟುಹಬ್ಬ

ರಾಮನಗರ, ಡಿಸೆಂಬರ್ 19; ಇತ್ತೀಚಿನ ದಿನಗಳಲ್ಲಿ ಜನ್ಮ ದಿನಾಚರಣೆ ಎಂದರೆ ಅಲ್ಲಿ ಆಡಂಬವೇ ಮನೆ ಮಾಡಿರುತ್ತದೆ. ಅದರಲ್ಲೂ ನಿವೃತ್ತ ಸರ್ಕಾರಿ ಅಧಿಕಾರಿಗಳು ತಮ್ಮ ಹುಟ್ಟುಹಬ್ಬವನ್ನು ಮುಂದಿನ ರಾಜಕೀಯ ಪ್ರವೇಶ‌ದ ವೇದಿಕೆಯನ್ನಾಗಿಸುತ್ತಾರೆ.

ಆದರೆ ಇಲ್ಲೂಬ್ಬರು ತನ್ನ ಹುಟ್ಟೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ರಾಮನಗರ ತಾಲೂಕಿನ ಗಡಿಗ್ರಾಮ ಅರಳಾಪುರದಲ್ಲಿ ಹುಟ್ಟಿ ಬೆಳೆದು ತವರುಮನೆಯಿಂದ ಪತಿಯಮನೆಗೆ ಹೋದರೂ ತವರೂರಿನ ಬಾಂಧವ್ಯದ ಸೆಳೆತಕ್ಕೆ ಹೆಣ್ಮಕ್ಕಳು ಮನ ಸೋಲುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ.

Unique Birthday

ಅರಳಾಪುರದ ನಿವೃತ್ತ ಸರ್ಕಾರಿ ಅಧಿಕಾರಿ ಪ್ರೇಮ ಕುಮಾರಿ ತನ್ನೂರಿನ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರೇಮ ಕುಮಾರಿ ತಮ್ಮ 75 ವರ್ಷದ ಹುಟ್ಟುಹಬ್ಬವನ್ನು ಅರಳಾಪುರ ಗ್ರಾಮದಲ್ಲಿ ತಾನು ಅಕ್ಷರ ಕಲಿತ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಮೂಲಕ ಗ್ರಾಮದ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಸಾಥ್ ನೀಡಿದ ಮೊಮ್ಮಕ್ಕಳು; ಪ್ರೇಮ ಕುಮಾರಿ ಕಾರ್ಯಕ್ಕೆ ಮೊಮ್ಮಕ್ಕಳಾದ10 ನೇ ತರಗತಿಯ ಚಿನ್ಮಯಿ ಮತ್ತು 8ನೇ ತರಗತಿಯ ಪೂರ್ಣಚಂದ್ರ ಇಬ್ಬರೂ ಕೈ ಜೋಡಿಸಿದರು. ತಾವು ಕೂಡಿಟ್ಟಿರುವ ಹಣದಲ್ಲಿ ಅರಳಾಪುರದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ‌ ಸರ್ಕಾರಿ‌ ಅಧಿಕಾರಿ ಪ್ರೇಮ ಕುಮಾರಿ, "ನಾನು ಅಕ್ಷರ ಕಲಿತ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕೆಂಬ ಅಭಿಲಾಷೆ ಇದೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಾಗಿರುವ ಅನುಕೂಲವನ್ನು ನಾನು ಕೂಡ ಮಾಡಿಕೊಡುವ ಸಂಕಲ್ಪ ಮಾಡಿದ್ದೇನೆ" ಎಂದರು.

ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರು, ಪ್ರೇಮ ಕುಮಾರಿ ಸಹೋದರರಾದ ವಿ. ತಿಮ್ಮೇಶ್ ಪ್ರಭು, ಮರಿಯಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರ್, ಶಾಲಾ ಮುಖ್ಯೋಪಾಧ್ಯಾಯರಾದ ಕೆಂಪೇಗೌಡ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+