ಕೊರೊನಾ ಆತಂಕ; ವೇತನ ಸಹಿತ ರಜೆಗೆ ಟಯೋಟಾ ಉದ್ಯೋಗಿಗಳ ಮನವಿ

ರಾಮನಗರ, ಮಾರ್ಚ್ 14: ಕೊರೊನಾ ವೈರಸ್ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟೊ ಮೋಟರ್ಸ್ ಎಂಪ್ಲಾಯೀಸ್ ಯೂನಿಯನ್ ಜಿಲ್ಲಾಡಳಿತಕ್ಕೆ ತಮಗೆ ರಜೆ ನೀಡುವಂತೆ ಮನವಿ ಮಾಡಿದೆ.

ಟಯೋಟಾ ಕಿರ್ಲೋಸ್ಕರ್ ಕಂಪನಿಯ ಉದ್ಯೋಗಿಯೊಬ್ಬರು ಒಂದು ತಿಂಗಳ ಹಿಂದಷ್ಟೇ ಜಪಾನಿನಿಂದ ಹಿಂದಿರುಗಿದ್ದರು. ಆ ವ್ಯಕ್ತಿಯಲ್ಲಿ ಮೊನ್ನೆಯಷ್ಟೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿದ್ದು, ಅವರಿಗೆ ತಕ್ಷಣ ರಜೆ ಮೇಲೆ ಕಳುಹಿಸಿರುವುದು ಕೂಡ ಅನುಮಾನಕ್ಕೆ ಎಡೆ ಮಾಡಿದೆ.

ಹೀಗಾಗಿ ಟಯೋಟಾ ಕಂಪನಿಯ ನೌಕರರ ಸಂಘ ರಾಮನಗರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಉಪ ನಿರ್ದೇಶಕರು, ಕೈಗಾರಿಕಾ ಸುರಕ್ಷಿತ ಮತ್ತು ಸ್ವಾಸ್ಥ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Toyota Kirloskar Employees Requested For Paid Leave Due To CoronaVirus

ನಮ್ಮದು ಬಹುರಾಷ್ಟ್ರೀಯ ಸಂಸ್ಥೆ. ಹೀಗಾಗಿ ಇಲ್ಲಿನ ಉದ್ಯೋಗಿಗಳು ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುವುದು ಸಹಜ. ಜೊತೆಗೆ ಹೊರದೇಶಗಳಿಂದಲೂ ಇಲ್ಲಿಗೆ ಬರುತ್ತಿರುತ್ತಾರೆ. ಇಲ್ಲಿನ ಉದ್ಯೋಗಿಯೊಬ್ಬರಿಗೆ ಮೊನ್ನೆಯಷ್ಟೆ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿದೆ. ಅವರನ್ನು ರಜೆ ನೀಡಿ ಕಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಎಂಟುನೂರು ಮಂದಿ ಬಗ್ಗೆ ನಿಗಾ ವಹಿಸಬೇಕಿದೆ. ಆದ್ದರಿಂದ ತಕ್ಷಣವೇ ವಿದೇಶದಿಂದ ಮರಳಿರುವ ಉದ್ಯೋಗಗಿಗಳ ಪರೀಕ್ಷೆ ನಡೆಸಿ ವರದಿ ನೀಡಬೇಕು. ಅಲ್ಲಿಯವರೆಗೂ ವೇತನಸಹಿತ ರಜೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+