ಕಳಪೆ ಕಾಮಗಾರಿ; ಚನ್ನಪಟ್ಟಣದಲ್ಲಿ ದೇವಾಲಯದ ನೂತನ ಗೋಪುರ ಕುಸಿತ

ರಾಮನಗರ, ಜೂನ್ 11: ನೂತನವಾಗಿ ನಿರ್ಮಾಣವಾಗಿದ್ದ 21 ಅಡಿ ಎತ್ತರದ ದೇವಾಲಯದ ಗೋಪುರ ಕುಸಿದು ಬಿದ್ದಿರುವ ಘಟನೆ ಚನ್ನಪಟ್ಟಣದ ಮಳೂರುಪಟ್ಟಣ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದ ಚೌಡೇಶ್ವರಿ ತಾಯಿ ದೇವಾಲದಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ 21 ಅಡಿಯ‌ ಎತ್ತರದ ಗೋಪುರ ಕಳೆದ ರಾತ್ರಿ ಕುಸಿದು ಬಿದ್ದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

Temple Pinannacle Collapsed In Ramanagar Due To Poor Quality Work

ಮುಜರಾಯಿ ಇಲಾಖೆಗೆ ಸೇರಿದ ಚೌಡೇಶ್ವರಿ ದೇವಾಲಯವನ್ನು ಇತ್ತೀಚಿಗಷ್ಟೆ ಸುಮಾರು 33 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿತ್ತು. ಗೋಪುರ ದಿಡೀರ್ ಕುಸಿತಕ್ಕೆ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಗ್ರಾಮಸ್ಥರ ಆರೋಪ ಮಾಡಿದ್ದಾರೆ. ದೇವಾಲಯದ ಗೋಪುರ ನಿರ್ಮಾಣದ ಗುತ್ತಿಗೆಯನ್ನು ತಮಿಳುನಾಡು ಮೂಲದ ಕುಮಾರ್ ಎನ್ನುವವರಿಗೆ ನೀಡಲಾಗಿತ್ತು. ಸ್ಥಳಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+