ವೀಡಿಯೋ ವೈರಲ್; ಮತ್ತೆ ರಾಮನಗರದಲ್ಲಿ ಕಾಣಿಸಿಕೊಂಡ ಏಳು ಹೆಡೆ ಸರ್ಪದ ಪೊರೆ!
ರಾಮನಗರ, ಅಕ್ಟೋಬರ್ 9: ಕನಕಪುರ ತಾಲೂಕಿನ ಮರಿಗೌಡನದೊಡ್ಡಿಯಲ್ಲಿ ಏಳು ಹೆಡೆ ಹಾವಿನ ಪೊರೆ ಮತ್ತೆ ಕಾಣಿಸಿಕೊಂಡಿದೆ. ಇದು ಜನರಲ್ಲಿ ಅಚ್ಚರಿಯನ್ನೂ, ಭೀತಿಯನ್ನೂ ತಂದಿದೆ.
ಇಂದು ಬೆಳಿಗ್ಗೆ ಕಸ ಗುಡಿಸುತ್ತಿದ್ದ ಸಂದರ್ಭ ಈ ಪೊರೆ ಕಂಡುಬಂದಿದೆ. ಸುಮಾರು ಆರು ತಿಂಗಳ ಹಿಂದೆ ಇದೇ ಜಾಗದಲ್ಲಿ ಏಳು ಹೆಡೆ ಹಾವಿನ ಪೊರೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಪೊರೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಇದು ಬಾಳಪ್ಪ ಎಂಬುವವರಿಗೆ ಸೇರಿದ ಜಮೀನಾಗಿದ್ದು, ದೇವಾಲಯದ ಪಕ್ಕವಿದೆ. ದೇವಸ್ಥಾನದಿಂದ ಹತ್ತು ಅಡಿ ದೂರದಲ್ಲಿ ಪೊರೆ ಬಿದ್ದಿದೆ. ಈ ಹಿಂದೆ ಪೊರೆ ದೊರೆತ ಜಾಗದಲ್ಲೇ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಪೊರೆಯನ್ನು ನೋಡಲು ಸುತ್ತಮುತ್ತಲಿನ ಊರಿನ ಜನರು ಇಲ್ಲಿಗೆ ದೌಡಾಯಿಸುತ್ತಿದ್ದಾರೆ.












Click it and Unblock the Notifications