ಕೊರೊನಾ ವೈರಸ್ ಭೀತಿಗೆ ರಾಮನಗರ ಮಿನಿ ವಿಧಾನ ಸೌಧ ಸೀಲ್ ಡೌನ್
ರಾಮನಗರ, ಜುಲೈ 23: ರಾಮನಗರದ ತಾಲ್ಲೂಕು ಕಚೇರಿಯ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ದೃಢಪಟ್ಟ ಪರಿಣಾಮ ಎರಡು ದಿನಗಳ ಕಾಲ ಮಿನಿ ವಿಧಾನ ಸೌಧವನ್ನು ಸೀಲ್ಡೌನ್ ಮಾಡಲು ರಾಮನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಾಮನಗರ ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೆಲಸದ ನಿಮಿತ್ತ ಗ್ರಾಮ ಲೆಕ್ಕಾಧಿಕಾರಿ ತಾಲ್ಲೂಕು ಕಚೇರಿಯಲ್ಲಿ ಓಡಾಡಿದ್ದರ ಕಾರಣದಿಂದಾಗಿ ಕಚೇರಿಯಲ್ಲಿ ಕೊರೊನಾ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕು ಕಚೇರಿಯನ್ನು ಎರಡು ದಿನ ಸೀಲ್ ಡೌನ್ ಮಾಡುವಂತೆ ತಹಶೀಲ್ದಾರರ ಮನವಿ ಮೇರೆಗೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಆದೇಶ ಹೊರಡಿಸಿದ್ದಾರೆ.

ಇಂದಿನಿಂದ (ಜು.23) 48 ಗಂಟೆಗಳ ಸೀಲ್ ಡೌನ್ ಸಮಯದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮಿನಿ ವಿಧಾನ ಸೌಧ ಅವರಣದಲ್ಲಿ ಹಾಜರಾಗುವಂತಿಲ್ಲ, ಎರಡು ದಿನ ತುರ್ತು ಕೆಲಸವಿದ್ದಲ್ಲಿ ತಮ್ಮ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications