ಮೆಡಿಕಲ್ ಕಾಲೇಜ್ ಶಿಫ್ಟ್: ಸೆಪ್ಟಂಬರ್ 8ರಂದು ರಾಮನಗರ ಬಂದ್

ರಾಮನಗರ, ಸೆ 2: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಎಲ್ಲಿಗೂ ಸ್ಥಳಾಂತರವಾಗುವುದಿಲ್ಲ, ಈ ವಿಚಾರದಲ್ಲಿ ಯಾರೂ ಆತಂಕ ಪಡುವುದು ಬೇಡ. ಹಾಗಾಗಿ ಸೆ.8 ರಂದು ಕರೆ ನೀಡಿರು ರಾಮನಗರ ಬಂದ್ ಆರ್ಥವಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿಯ ಮೆಡಿಕಲ್ ಕಾಲೇಜು ಯೋಜನೆಯನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಬಲವಂತವಾಗಿ ರಾಜೀವ್ ಗಾಂಧಿ ವಿವಿ ಅವರಣದಿಂದ ಕನಕಪುರಕ್ಕೆ ಶಿಫ್ಟ್ ಮಾಡುತ್ತಿದ್ದಾರೆ ಎಂದು‌ ಆರೋಪಿಸಿ ಶ್ರೀ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸೆ.8 ರಂದು ರಾಮನಗರ ಬಂದ್ ಗೆ ಕರೆ ನೀಡಿದೆ.

ramanagar-bandh-called-on-september-8th

ರಾಮನಗರ ಬಂದ್ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, "ರಾಜೀವ್ ಗಾಂಧಿ ವಿವಿ‌ ಅವರಣದ ನಮ್ಮ ಕಾಲೇಜು ರಾಜೀವ್ ಗಾಂಧಿ ಯೂನಿವರ್ಸಿಟಿಯಲ್ಲೇ ಇರುತ್ತೆ. ಈ ಸಂಬಂದ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ನಮ್ಮ ಜೊತೆ ಸಂಸದರಾದ ಡಿ.ಕೆ.ಸುರೇಶ್ ಕೂಡ ಇದ್ದರು, ಕಾಲೇಜು ಸ್ಥಳಾಂತರ ಗೊಂದಲಕ್ಕೆ ತೆರೆಎಳೆಯುವಂತೆ ಅವರಲ್ಲಿ ಮನವಿ ಮಾಡಿದ್ದೇವೆ" ಎಂದು ಶಾಸಕ ಹುಸೇನ್ ಸ್ಪಷ್ಟ ಪಡಿಸಿದ್ದಾರೆ.

ಸೆ. 5 ರ ಒಳಗೆ ಸಚಿವರಿಂದ ಮೆಡಿಕಲ್ ಕಾಲೇಜು ಗುದ್ದಲಿ ಪೂಜೆ :

ಸಚಿವ ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀವೆ ಬಂದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಪೂಜೆ ಮಾಡುವಂತೆ ಕೇಳಿಕೊಂಡಿದ್ದೇನೆ. ಅಲ್ಲದೇ ಸೆ.5‌ ರ ಒಳಗೆ ರಾಜೀವ್ ಗಾಂಧಿ ವಿವಿ ಅವರಣದ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದೇವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ನೇತೃತ್ವದಲ್ಲಿ ನಾನೇ ಆ ಕೆಲಸ ಮಾಡುತ್ತೇನೆ ಎಂದು ಶಾಸಕರು ಹೇಳಿದ್ದಾರೆ.

"ರಾಜೀವ್ ಗಾಂಧಿ ವಿವಿ ಮೆಡಿಕಲ್ ಕಾಲೇಜಿಗೂ ಕನಕಪುರ ಮೆಡಿಕಲ್ ಕಾಲೇಜಿಗೂ ಸಂಬಂಧ ಇಲ್ಲ‌. ‌‌ರಾಜೀಗಾಂಧಿ ಆರೋಗ್ಯ ವಿವಿ ಮೆಡಿಕಲ್ ಕಾಲೇಜು ಮಂಜೂರಾಗಿ 20 ವರ್ಷ ಕಳೆದು ಹೋಗಿದೆ. ಹಿಂದೆ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ನಂತರ ಆ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಲಗಿತ್ತು‌. ಈಗ ಮತ್ತೆ ಕನಕಪುರಕ್ಕೆ ನಮ್ಮ ನಾಯಕರು ಕಾಲೇಜು ತಂದಿದ್ದಾರೆ" ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಕಾಂಗ್ರೆಸ್ ಗ್ಯಾರೆಂಟಿ ಕಂಡು ಹೊಟ್ಟೆ ಕಿಚ್ಚು

ವಿನಾಕಾರಣ ಕೆಲವರು ಮೆಡಿಕಲ್ ಕಾಲೇಜು ವಿಚಾರದಲ್ಲಿ ರಾಜೀಕೀಯ ಮಾಡುತ್ತಾ ಇದ್ದಾರೆ. ಇದೆಲ್ಲದಕ್ಕೂ ಕಾಂಗ್ರೆಸ್ ನೇತೃತ್ವದ ಸರ್ಕಾರ ನುಡಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ. ಹಾಗಾಗಿ ಕಾಂಗ್ರೆಸ್ ಬಗ್ಗೆ ಜನರಿಗೆ ಒಳ್ಳೆ ಆಸಕ್ತಿ, ವಿಶ್ವಾಸ ಮೂಡಿದೆ. ಒಳ್ಳೆ ಕೆಲಸ ಮಾಡಲು ಬಿಡುತ್ತಿಲ್ಲ ಅನ್ನುವ ಹೊಟ್ಟೆ ಕಿಚ್ವಿಗೆ ಕೆಲವರು ಹೀಗೆಲ್ಲಾ ಗೊಂದಲ ಸೃಷ್ಟಿ ಮಾಡುತ್ತಾ ಇದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+