ಅನಿತಾ-ಡಿಕೆಶಿ ಮಾತುಕತೆಗೆ ವಿಶೇಷ ಅರ್ಥಬೇಡ: ಎಚ್ಡಿಕೆ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada
   ಅನಿತಾ-ಡಿಕೆಶಿ ಮಾತುಕತೆಗೆ ವಿಶೇಷ ಅರ್ಥಬೇಡ: ಎಚ್ಡಿಕೆ | Oneindia Kannada

   ರಾಮನಗರ, ನವೆಂಬರ್ 26: ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡಬೇಕೆಂಬ ನಿಲುವು ನಮ್ಮದು. ಆ ಕ್ಷೇತ್ರದಲ್ಲೇ ಯಾರನ್ನಾದರೂ ಒಬ್ಬರನ್ನ ಅಭ್ಯರ್ಥಿ ಮಾಡಿ ಎಂದು ಸೂಚಿಸಿದ್ದೆ. ಆದರೆ, ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು ಮುಖಂಡರು ಅನಿತಾರನ್ನೇ ಅಭ್ಯರ್ಥಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

   ಕಾರ್ಯಕರ್ತರ ಒತ್ತಾಯದಿಂದ ಒಂದು ರೀತಿಯ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ದೇವೇಗೌಡರ ಜೊತೆ ಚರ್ಚಿಸಿ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುತ್ತೆವೆ ಎಂದು ಎಚ್.ಡಿ.ಕುಮಾರಸ್ವಾಮಿಯವರು ರಾಮನಗರದ ಮರಳವಾಡಿಯಲ್ಲಿ ಹೇಳಿಕೆ ನೀಡಿದರು.

   'ಚನ್ನಪಟ್ಟಣವನ್ನ ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ'

   ನವೆಂಬರ್ 16 ರಂದು ಮರಳವಾಡಿಯಲ್ಲಿ ಶಾಲಾ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದ ಚರಣ್ ಗೌಡನ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮಗುವಿನ ಪೋಷಕರಿಗೆ ಸಾಂತ್ವನ ಹೇಳಿದರು.

   ಇತ್ತೀಚೆಗೆ ಕನಕ ಉತ್ಸವ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದರ ಬಗ್ಗೆ ಕೂಡಾ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದರು.

   ಮಕ್ಕಳ ಸಾವು ಹೃದಯವನ್ನೇ ಚೂರು ಮಾಡುತ್ತೆ

   ಮಕ್ಕಳ ಸಾವು ಹೃದಯವನ್ನೇ ಚೂರು ಮಾಡುತ್ತೆ

   ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಳವಾಡಿ ಹೋಬಳಿಯ ಗೆಂಡೇಗೌಡನದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಖಾಸಗಿ ಶಾಲಾ ವಾಹನಗಳ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕೆಂದು ಮನವಿ ಮಾಡ್ತೇನೆ. ಮಕ್ಕಳ ಜೀವದ ಜೊತೆ ಯಾರೊಬ್ಬರೂ ಚೆಲ್ಲಾಟವಾಡಬೇಡಿ. ಮಕ್ಕಳ ಸಾವು ಹೃದಯವನ್ನೇ ಚೂರು ಮಾಡುತ್ತೆ ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

   ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ಒಪ್ಪಂದವಿಲ್ಲ

   ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ಒಪ್ಪಂದವಿಲ್ಲ

   ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ಒಪ್ಪಂದವಿಲ್ಲ. ನನಗೆ ಕಾರ್ಯಕರ್ತರು ಮುಖ್ಯವೇ ಹೊರತು, ನನಗೆ ಬೇರೆ ಪಕ್ಷದ ಮುಖಂಡರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ. ನಮ್ಮ ಒಕ್ಕಲಿಗ ಸಮಾಜದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗುವಂತೆ ಸಮುದಾಯದ ಸ್ವಾಮೀಜಿಗಳು ಹಾಗೂ ಹಿರಿಯರು ಹೇಳಿರುವ ಪ್ರಕಾರದ ಸಮಾಜದ ವಿಚಾರದಲ್ಲಿ ಮಾತ್ರ ನಾವು ಒಂದಾಗಿರ್ತೇವೆ.

   ಅನಿತಾ- ಡಿಕೆಶಿ ಮಾತುಕತೆ ಬಗ್ಗೆ

   ಅನಿತಾ- ಡಿಕೆಶಿ ಮಾತುಕತೆ ಬಗ್ಗೆ

   ರಾಜಕಾರಣದ ವಿಚಾರದಲ್ಲಿ ನನ್ನದೇ ಬೇರೆ ಅವರದ್ದೇ ಬೇರೆ ದಾರಿ. ಇನ್ನೂ ಕಾರ್ಯಕ್ರಮವೊಂದರಲ್ಲಿ ಅನಿತಾ ಕುಮಾರಸ್ವಾಮಿಯವರೊಂದಿಗೆ ಡಿಕೆ ಶಿವಕುಮಾರ್ ಜೊತೆ ಸಹಜವಾಗಿ ಮಾತನಾಡಿದ್ದಾರೆ. ಅದಕ್ಕೆ ಬೇರೆ ರಾಜಕೀಯದ ಅರ್ಥ ಕೊಡೋದು ಬೇಡ ಎಂದು ಇದೇ ಸಮಯದಲ್ಲಿ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.

   ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ

   ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ

   ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಡಿ ಬಿಡುಗಡೆ ಮಾಡಲಾಗುವುದು. ನಾವು 224 ಕ್ಷೇತ್ರಗಳಲ್ಲಿ ಏಕಾಂಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಅನಿವಾರ್ಯವೆಂದು ಅವರಿಗೆ ಗೊತ್ತಿದೆ. ಆದರೆ, ರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆಯಿದ್ದು, 113 ಕ್ಷೇತ್ರಗಳಲ್ಲಿ ಗೆದ್ದು ಏಕಾಂಗಿ ಅಧಿಕಾರಕ್ಕೆ ತರಲು ರಾಜ್ಯದ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   No need for any kind of internal coalition before elections said: JDS state president HD Kumaraswamy. HD Kumaraswamy in Maralawadi said, JDS activists are demanding Anitha Kumaraswamy to contest from Channapatna constituency, HD Deve Gowda will take decision on this.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ