ಡಿ.ಕೆ.ಶಿವಕುಮಾರ್ ಆಪ್ತ ಪಿ.ನಾಗರಾಜು ಜೆಡಿಎಸ್‌ ಸೇರ್ಪಡೆ

Posted By: Gururaj
Subscribe to Oneindia Kannada
   ರಾಮನಗರದ ಕೆ ಎಂ ಎಫ್ ಮಾಜಿ ಅಧ್ಯಕ್ಷ, ಡಿ ಕೆ ಶಿವಕುಮಾರ್ ಆಪ್ತ ಜೆಡಿಎಸ್ ಪಾಲು | Oneindia Kannada

   ರಾಮನಗರ, ಏಪ್ರಿಲ್ 11 : ಕೆಎಂಎಫ್ ಮಾಜಿ ಅಧ್ಯಕ್ಷ, ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ಪಿ.ನಾಗರಾಜು ಜೆಡಿಎಸ್ ಸೇರಲಿದ್ದಾರೆ. ನಾಗರಾಜ್ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಕಾದು ನೋಡಬೇಕು.

   ಪಿ.ನಾಗರಾಜು ಅವರು ಗುರುವಾರ ಎಚ್.ಡಿ.ರೇವಣ್ಣ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆಪ್ತರು ಜೆಡಿಎಸ್ ಸೇರುತ್ತಿರುವುದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

   ರಾಮನಗರದ ಸಾತನೂರು ಮೂಲದ ಪಿ.ನಾಗರಾಜು ರಾಮನಗರ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದರು. 2014ರಲ್ಲಿ ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಚುನಾವಣೆ ನಡೆದಾಗ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

   KMF former president P Nagaraju will join JDS

   2017ರ ಮಾರ್ಚ್‌ನಲ್ಲಿ ಪಿ.ನಾಗರಾಜು ಅವರು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

   ಕೆಎಂಎಫ್ ಅಧ್ಯಕ್ಷರಾಗಿ ಎಂ.ಪಿ ರವೀಂದ್ರ ನೇಮಕ

   ಡಿ.ಕೆ.ಶಿವಕುಮಾರ್ ಅವರಾದ ಪಿ.ನಾಗರಾಜು ಅವರನ್ನು ಅಧಿಕಾರ ಹಂಚಿಕೆ ಸೂತ್ರದ ಅನ್ವಯ ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ, ಎರಡು ವರ್ಷಗಳ ನಂತರ ಅಧಿಕಾರ ಬಿಟ್ಟುಕೊಡಲು ಅವರು ನಿರಾಕರಿಸಿದ್ದರು.

   ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರದ ರಾಜಕೀಯ ಚಿತ್ರಣ

   ನಂತರ ಡಿ.ಕೆ.ಶಿವಕುಮಾರ್ ಅವರು ಒತ್ತಡ ಹೇರಿ ನಾಗರಾಜು ಬಳಿ ರಾಜೀನಾಮೆ ಪಡೆದಿದ್ದರು. ಈ ಬೆಳವಣಿಗೆ ಬಳಿಕ ಕಾಂಗ್ರೆಸ್ ನಾಯಕರ ವಿರುದ್ಧ ಪಿ.ನಾಗರಾಜು ಅಸಮಾಧಾನಗೊಂಡಿದ್ದರು. ಈಗ ಅವರು ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದಾರೆ.

   ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಪಿ.ನಾಗರಾಜು ಅವರು, 'ನಾನು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲ್ಲ. ಡಿ.ಕೆ.ಶಿವಕುಮಾರ್ ತಮ್ಮ ಮೇಲೆ ಒತ್ತಡ ಹೇರಿ, ಮನೆಗೆ ಕರೆಸಿಕೊಂಡು ಕೆಲವು ಖಾಲಿ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ' ಎಂದು ಆರೋಪಿಸಿದ್ದರು.

   ರಾಮನಗರದ ಮೂಲದ ಪಿ.ನಾಗರಾಜು ಅವರು ಚುನಾವಣೆ ಸಮಯದಲ್ಲಿ ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ. ರಾಮನಗರದ ಯಾವುದೇ ಕ್ಷೇತ್ರದಿಂದ ಜೆಡಿಎಸ್ ಅವರಿಗೆ ಟಿಕೆಟ್ ನೀಡಲಿದೆಯೇ?ಎಂದು ಕಾದು ನೋಡಬೇಕಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Former president of Karnataka Milk Federation (KMF) P.Nagaraju will join JD(S) in the presence of H.D.Revanna on April 11, 2018. P.Nagaraju close aide of Energy Minister D.K.Shivakumar. Nagaraju will contest for Karnataka assembly elections 2018?.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ