SWR: ಹುಬ್ಬಳ್ಳಿ ವಿಭಾಗದಲ್ಲಿ ರೈಲು ಸಂಚಾರ ವ್ಯತ್ಯಯ; ಹಲವು ರೈಲುಗಳು ಭಾಗಶಃ ರದ್ದು

ಹುಬ್ಬಳ್ಳಿ: ರೈಲ್ವೆ ಇಲಾಖೆ ವತಿಯಿಂದ ಮುಲ್ವಾಡ್-ಜುಮ್ನಾಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ ಕೆಲವು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ. ಮತ್ತು ಭಾಗಶಃ ರದ್ದುಗೊಳಿಸಲಾಗಿದೆ. ಪ್ರಯಾಣಿಕರು ಗಮನಿಸಿ ಪ್ರಯಾಣ ಯೋಜಿಸಿಕೊಳ್ಳುವಂತೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ಜಂಕ್ಷನ್‌ ನಿಂದ ಮಹಾರಾಷ್ಟ್ರದ ಸೊಲ್ಲಾಪುರ, ವಿಜಯಪುರಕ್ಕೆ ತೆರಳುವ ಮಾರ್ಗದ ಸಾರ್ವಜನಿಕರಿಗೆ ಕೊಂಚ ಅಡಚಣೆ ಉಂಟಾಗಲಿದೆ. ರೈಲು ವಿಳಂಬ ಜೊತೆಗೆ ಅಂತಿಮ ನಿಲುಗಡೆ, ಸಂಚಾರ ಆರಂಭದ ನಿಲ್ದಾಣಗಳಲ್ಲಿ ಬದಲಾವಣೆ ಆಗಿದೆ.

South Western Railway

ರೈಲುಗಳ ನಿಯಂತ್ರಣ, ಬದಲಾವಣೆ ಪಟ್ಟಿ ಹೀಗಿದೆ

ಎಸ್‌ಎಸ್‌ಎಸ್ ಹುಬ್ಬಳ್ಳಿ-ಸೋಲಾಪುರ ಎಕ್ಸ್‌ಪ್ರೆಸ್ ರೈಲು (56906) ಈ ರೈಲು ಮೇ 14, 2026 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ವಿಜಯಪುರ ನಡುವೆ ಭಾಗಶಃ ಸಂಚಾರ ರದ್ದು ಮಾಡಲಾಗಿದೆ. ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯ ಬದಲಾಗಿ ವಿಜಯಪುರದಿಂದ ತನ್ನ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸುತ್ತದೆ.

Vande Bharat Express: ಬೆಂಗಳೂರು-ತಿರುಪತಿ ಪ್ರಯಾಣಿಕರಿಗೆ ಗುಡ್‌ನ್ಯೂಸ್, ಹೊಸ ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ
Vande Bharat Express: ಬೆಂಗಳೂರು-ತಿರುಪತಿ ಪ್ರಯಾಣಿಕರಿಗೆ ಗುಡ್‌ನ್ಯೂಸ್, ಹೊಸ ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ

ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ವಿಶೇಷ ರೈಲು (66501) ರೈಲು ಮೇ 14, 2026 ರಂದು ಕೂಡಗಿ ಮತ್ತು ವಿಜಯಪುರ ಸಂಚಾರ ಮಾಡುವುದಿಲ್ಲ, ಇಲ್ಲಿ ಭಾಗಶಃ ರದ್ದಾಗಲಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಈ ರೈಲನ್ನು ಕೂಡಗಿ ನಿಲ್ದಾಣದಲ್ಲಿಯೇ ಸ್ಥಗಿತಗೊಳಿಸಲಾಗುತ್ತದೆ.

ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು (66502) ರೈಲು ಮೇ 15, 2026 ರಂದು ವಿಜಯಪುರ ಮತ್ತು ಕೂಡಗಿ ಮಧ್ಯೆ ಸಂಚಾರ ಮಾಡುವುದನ್ನು ರದ್ದು ಮಾಡಲಾಗಿದೆ. ಈ ರೈಲು ವಿಜಯಪುರದ ಬದಲಾಗಿ ಕೂಡಗಿ ನಿಲ್ದಾಣದಿಂದ ತನ್ನ ನಿಗದಿತ ಸಮಯದಲ್ಲಿ ಪ್ರಯಾಣವನ್ನು ಪ್ರಾರಂಭಿಸಲಿದೆ. ಈ ಬದಲಾವಣೆ ಗಮನಿಸಿ ರೈಲು ಪ್ರಯಾಣಿಕರು ಪ್ರಯಾಣವನ್ನು ಪ್ಲ್ಯಾನ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ರೈಲುಗಳ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್ www.indianrail.gov.in/ ಗೆ ಸಂಪರ್ಕಿಸಬಹುದು.

ಕರ್ನಾಟಕ-ತೆಲಂಗಾಣ ರೈಲು ಸಂಪರ್ಕದಲ್ಲಿ ಸುಧಾರಣೆ

ತೆಲಂಗಾಣ ಮತ್ತು ಕರ್ನಾಟಕ ನಡುವಿನ ರೈಲು ಸಂಪರ್ಕವನ್ನು ಬಲಪಡಿಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಮಂಡಳಿಯು ಚರ್ಲಪಲ್ಲಿ- ಬೆಳಗಾವಿ-ಚರ್ಲಪಲ್ಲಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಕ್ರಮಬದ್ಧಗೊಳಿಸಲು ಅನುಮೋದನೆ ನೀಡಿದೆ. ಈ ಮೂಲಕ ಎರಡು ರಾಜ್ಯಗಳ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಯಾಣಿಕರು ಎರಡೂ ರಾಜ್ಯಗಳನ್ನು ಸರಾಗವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅನುಕೂಲಕರ ಪ್ರಯಾಣ ಸಿಕ್ಕಂತಾಗುವ ಜೊತೆಗೆ ಹೆಚ್ಚುವರಿ ರೈಲು ಸಾರಿಗೆ ಒದಗಿಸಿದಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+