MSP: ಅನ್ನದಾತರ ಹಿತರಕ್ಷಣೆಗೆ ಮೋದಿ ಸರ್ಕಾರ ಸದಾ ಬದ್ಧ ಎಂದ ಬಿ.ವೈ ವಿಜಯೇಂದ್ರ

MSP: ಏನೇ ಸವಾಲುಗಳಿರಲಿ, ಅನ್ನದಾತರ ಹಿತರಕ್ಷಣೆಗೆ ನರೇಂದ್ರ ಮೋದಿ ಸರ್ಕಾರ ಸದಾ ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರ 2026-27ರ ಮಾರುಕಟ್ಟೆ ಹಂಗಾಮಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಗಣನೀಯವಾಗಿ ಹೆಚ್ಚಿಸಿರುವುದು ಅತ್ಯಂತ ಸ್ವಾಗತಾರ್ಹ. ಕೃಷಿ ವೆಚ್ಚಕ್ಕಿಂತ ಕನಿಷ್ಠ 50% ರಷ್ಟು ಹೆಚ್ಚಿನ ಲಾಭವನ್ನು ರೈತರಿಗೆ ಖಾತ್ರಿಪಡಿಸುವ ಮೂಲಕ, ನಮ್ಮ ರೈತರ ಹಿತ ಕಾಯುವ ತನ್ನ ಸಂಕಲ್ಪವನ್ನು ಮೋದಿ ಜೀ ಸರ್ಕಾರ ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಕೇವಲ ಅಂಕಿ-ಅಂಶವಲ್ಲ, ನಮ್ಮ ಅನ್ನದಾತರಿಗೆ ನಾವು ನೀಡುವ ಗೌರವವಾಗಿದೆ ಎಂದು

2026-27ರ ಮಾರುಕಟ್ಟೆ ಹಂಗಾಮಿಗಾಗಿ ಭತ್ತ, ಹತ್ತಿ, ತೊಗರಿ, ಜೋಳ, ಎಣ್ಣೆ ಕಾಳುಗಳು ಸೇರಿದಂತೆ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಲಾಗಿದ್ದು, ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 72 ರೂ.ಹೆಚ್ಚಿಸಲಾಗಿದೆ.

MSP

ಇದರಿಂದ, 1 ಕ್ವಿಂಟಲ್‌ ಭತ್ತದ ಬೆಲೆ 2,441 ರೂ ಆಗಿದೆ. ಸೂರ್ಯಕಾಂತಿ ಬೀಜಕ್ಕೆ ಕ್ವಿಂಟಾಲ್‌ಗೆ 622 ರೂ ಹೆಚ್ಚಿಸಲಾಗಿದ್ದು, ಕ್ವಿಂಟಾಲ್‌ಗೆ 8,343 ರೂ. ಆಗಿದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಬೆಳೆ ವೈವಿಧ್ಯವನ್ನು ಉತ್ತೇಜಿಸುವ ಸಲುವಾಗಿ ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆ ನೀಡಲಾಗಿದೆ.

ಬಿತ್ತನೆಯಿಂದ ಮಾರುಕಟ್ಟೆಯವರೆಗೆ ರೈತರ ಕೈ ಹಿಡಿದು ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ನಿರ್ಧಾರ, ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಬೆಳೆ ವೈವಿಧ್ಯವನ್ನು ಉತ್ತೇಜಿಸುವ ಸಲುವಾಗಿ ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆ ನೀಡಿರುವ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಹಾಗೂ ಕೇಂದ್ರದ ಎನ್.ಡಿ.ಎ ಸರ್ಕಾರಕ್ಕೆ ರಾಜ್ಯದ ಸಮಸ್ತ ರೈತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.

MSP: ಕರ್ನಾಟಕ ಬಿಜೆಪಿ ಟ್ವೀಟ್

ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರೈತರ ಹಿತದೃಷ್ಟಿಯಿಂದ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, 2026-27 ರ ಮಾರುಕಟ್ಟೆ ಋತುವಿನಲ್ಲಿ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಯನ್ನು ಅನುಮೋದಿಸಿದೆ.

ಭತ್ತದಿಂದ ಹಿಡಿದು ಎಳ್ಳು, ದ್ವಿದಳ ಧಾನ್ಯಗಳಿಂದ ಹತ್ತಿಯವರೆಗೆ, ಪ್ರತಿ ಬೆಳೆಯ ಜೊತೆಗೆ ರೈತರ ವಿಶ್ವಾಸವನ್ನೂ ಬಲಪಡಿಸಲಾಗಿದೆ. ಇದು ಕೇವಲ MSP ಹೆಚ್ಚಳವಲ್ಲ, ಬದಲಾಗಿ ರೈತರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕನಸುಗಳನ್ನು ಗೌರವಿಸುವ ಸಂಕಲ್ಪವಾಗಿದೆ ಎಂದು ಕರ್ನಾಟಕ ಬಿಜೆಪಿಯು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+