ಬೇಸಿಗೆಯಲ್ಲಿ ಬೇಗ ಹಾಳಾಗದ ಉಪಹಾರಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೇಸಿಗೆ ಕಾಲ ಆರಂಭವಾದರೆ ಸಾಕು ಬೆಳಿಗ್ಗೆ ಉಪಹಾರದಲ್ಲಿ ಹಾಕುವ ಪದಾರ್ಥಗಳು ಮತ್ತು ಆಹಾರವನ್ನು ತಾಜಾವಾಗಿ ಇಡುವುದೇ ಒಂದು ದೊಡ್ಡ ಸವಾಲಾಗುತ್ತದೆ. ಕಚೇರಿ, ಶಾಲೆ ಅಥವಾ ಪ್ರಯಾಣದ ವೇಳೆ ಕೆಲವೇ ಗಂಟೆಗಳಲ್ಲಿ ಆಹಾರ ಹಾಳಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ವಿಶೇಷವಾಗಿ ಮೇ ಮತ್ತು ಜೂನ್ ತಿಂಗಳ ತೀವ್ರ ಬಿಸಿಲಿನಲ್ಲಿ ತಾಪಮಾನಕ್ಕೆ ಮೊಸರು, ಗ್ರೇವಿ ಅಥವಾ ಹೆಚ್ಚು ತೇವಾಂಶ ಇರುವ ಆಹಾರಗಳು ಬೇಗ ಕೆಡುವುದು ಸಾಮಾನ್ಯ. ಆದ್ದರಿಂದ ಬಿಸಿಲಿನಲ್ಲೂ ಹಾಳಾಗದ, ರುಚಿಕರ ಮತ್ತು ಆರೋಗ್ಯಕರ ಆಹಾರಗಳು ಯಾವುದು ಎನ್ನುವ ಪ್ರಶ್ನೆ ಅನೇಕ ಮನೆಗಳಲ್ಲಿ ಮೂಡುತ್ತದೆ.

ಪ್ರತಿದಿನ ಒಂದೇ ರೀತಿಯ ಡ್ರೈ ಫುಡ್‌ ಹಾಕಿ ಬೇಸರಗೊಂಡಿದ್ದರೆ, ಇಲ್ಲಿವೆ ಬೇಸಿಗೆಯ ಬಿಸಿಲಿನಲ್ಲೂ ಸುಲಭವಾಗಿ ಹಾಳಾಗದ ಕೆಲವು ಉಪಹಾರದ ಐಡಿಯಾಗಳು. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇವು ಇಷ್ಟವಾಗುವ ಸಾಧ್ಯತೆ ಇದೆ.

Summer Tiffin Tips

ಇಡ್ಲಿ ಮತ್ತು ಒಣ ತೆಂಗಿನಕಾಯಿ ಚಟ್ನಿ

ದಕ್ಷಿಣ ಭಾರತೀಯ ಆಹಾರಗಳಲ್ಲಿ ಇಡ್ಲಿ ಮತ್ತು ಒಣ ತೆಂಗಿನಕಾಯಿ ಚಟ್ನಿ ಆರೋಗ್ಯಕರ ಉಪಹಾರದ ಆಯ್ಕೆಯಾಗಿದೆ. ಆದರೆ ತಾಜಾ ತೆಂಗಿನ ಚಟ್ನಿ ಬೇಗ ಹಾಳಾಗುವ ಕಾರಣ ಒಣ ತೆಂಗಿನ ಚಟ್ನಿ ಬಳಸುವುದು ಉತ್ತಮ. ಇಡ್ಲಿ ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ಬೇಸಿಗೆಯಲ್ಲಿ ಹೊಟ್ಟೆಗೆ ತಂಪು ನೀಡುತ್ತದೆ.

ಬೇಸಿಗೆಯಲ್ಲಿ ಆರೋಗ್ಯವಾಗಿರಬೇಕಾ ? ಈ 7 ಸರಳ ಅಭ್ಯಾಸಗಳನ್ನು ಇಂದೇ ಆರಂಭಿಸಿ
ಬೇಸಿಗೆಯಲ್ಲಿ ಆರೋಗ್ಯವಾಗಿರಬೇಕಾ ? ಈ 7 ಸರಳ ಅಭ್ಯಾಸಗಳನ್ನು ಇಂದೇ ಆರಂಭಿಸಿ

ವೆಜ್ ಪುಲಾವ್ ಮತ್ತು ಹುರಿದ ಕಡಲೆಕಾಯಿ

ಹಗುರವಾಗಿಯೂ ಹೊಟ್ಟೆ ತುಂಬುವ ಆಹಾರ ಬೇಕೆಂದರೆ ವೆಜ್ ಪುಲಾವ್ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಗ್ರೇವಿ ಕಡಿಮೆ ಇರುವುದರಿಂದ ಬೇಗ ಹಾಳಾಗುವುದಿಲ್ಲ. ಕ್ಯಾರೆಟ್‌, ಬೀನ್ಸ್, ಬಟಾಣಿ ಸೇರಿಸಿ ಪುಲಾವ್ ತಯಾರಿಸಿ, ಜೊತೆಗೆ ಹುರಿದ ಕಡಲೆಕಾಯಿ ಹಾಕಿದರೆ ರುಚಿಯ ಜೊತೆಗೆ ಪ್ರೋಟೀನ್‌ ಕೂಡ ದೊರೆಯುತ್ತದೆ. ಪುಲಾವ್ ಸಂಪೂರ್ಣ ತಣ್ಣಗಾದ ನಂತರವೇ ಟಿಫಿನ್ ಬಾಕ್ಸಿಗೆ ಹಾಕುವುದು ಉತ್ತಮ.

Summer Tiffin Tips

ಮಸಾಲಾ ಅಥವಾ ಆಲೂ ಪರೋಟಾ ಮತ್ತು ಡ್ರೈ ಆಲೂಗಡ್ಡೆ ಪಲ್ಯ

ಬೇಸಿಗೆಯಲ್ಲಿ ಮಸಾಲಾ ಪರೋಟಾ ಉಪಹಾರಕ್ಕೆ ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ. ಗೋಧಿ ಹಿಟ್ಟಿಗೆ ಅಜ್ವಾನ, ಅರಿಶಿನ, ಉಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಪರೋಟಾ ತಯಾರಿಸಬಹುದು. ಇದರ ಜೊತೆಗೆ ಕಡಿಮೆ ಈರುಳ್ಳಿ ಮತ್ತು ಟೊಮೆಟೊ ಬಳಸಿ ಮಾಡಿದ ಡ್ರೈ ಆಲೂಗಡ್ಡೆ ಪಲ್ಯ ಹಾಕಿದರೆ 6ರಿಂದ 7 ಗಂಟೆಗಳವರೆಗೆ ಆಹಾರ ತಾಜಾ ಇರುತ್ತದೆ.

ಬೇಸಿಗೆಯಲ್ಲಿ ಈ 5 ಈ ತಪ್ಪುಗಳನ್ನು ಮಾಡಬೇಡಿ: ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು
ಬೇಸಿಗೆಯಲ್ಲಿ ಈ 5 ಈ ತಪ್ಪುಗಳನ್ನು ಮಾಡಬೇಡಿ: ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು

ಬೇಸನ್ ಚೀಲಾ ರೋಲ್ಸ್

ಕಡಲೆ ಹಿಟ್ಟಿನಿಂದ ತಯಾರಿಸಿದ ಆಹಾರಗಳು ಬೇಸಿಗೆಯಲ್ಲಿ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಬೇಸನ್ ಚೀಲಾ ಮಾಡಿ ಅದರೊಳಗೆ ಡ್ರೈ ತರಕಾರಿ ಪಲ್ಯ ತುಂಬಿ ರೋಲ್‌ ರೂಪದಲ್ಲಿ ತಯಾರಿಸಬಹುದು. ಇದು ಮಕ್ಕಳ ಉಪಹಾರಕ್ಕು ಸೂಕ್ತವಾಗಿರುತ್ತದೆ. ಕಡಲೆ ಹಿಟ್ಟಿನಲ್ಲಿರುವ ಪ್ರೋಟೀನ್‌ ದೇಹಕ್ಕೆ ಶಕ್ತಿ ನೀಡುವುದಲ್ಲದೆ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ.

ಸೂಚನೆ: ಈ ಮಾಹಿತಿ ಸಾಮಾನ್ಯ ಆಹಾರ ಸಲಹೆಗಳ ಆಧಾರಿತವಾಗಿದ್ದು, ಆರೋಗ್ಯ ಸಮಸ್ಯೆಗಳಿದ್ದರೆ ತಜ್ಞ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+