Kiran Raj: “ನನ್ನ ಮಗಳನ್ನ ಮದುವೆಯಾಗು ಅಂತಾರೆ”: ಅಭಿಮಾನಿಗಳ ಡಿಮ್ಯಾಂಡ್ ಬಗ್ಗೆ ಕಿರಣ್ ರಾಜ್ ಮಾತು ವೈರಲ್

Kiran Raj: ಕನ್ನಡದ ಪ್ರಮುಖ ಸೀರಿಯಲ್ ಕರ್ಣ - ಕನ್ನಡತಿ ಸೀರಿಯಲ್‌ನ ನಟ ಕಿರಣ್​ ರಾಜ್ ಅವರು ಮದುವೆ ಹಾಗೂ ಕೆಲವು ಅಭಿಮಾನಿಗಳ ಅನಿರೀಕ್ಷಿತ ಡಿಮ್ಯಾಂಡ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕನ್ನಡದಲ್ಲಿ ಮೂಡಿ ಬರುತ್ತಿರುವ ಪ್ರಮುಖ ಸೀರಿಯಲ್‌ಗಳಲ್ಲಿ ಕರ್ಣ ಸೀರಿಯಲ್ ಭಾರೀ ಜನ ಮನ್ನಣೆಯನ್ನು ಗಳಿಸಿದೆ. ಅಲ್ಲದೆ ಟಿಆರ್‌ಪಿ ರೇಸ್‌ನಲ್ಲೂ ಮುಂಚೂಣಿಯಲ್ಲಿದೆ. ಕರ್ಣ ಸೀರಿಯಲ್‌ನಲ್ಲಿ ನಟ ಕಿರಣ್ ರಾಜ್ ಅವರ ಅಭಿನಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅವರ ಅಭಿಮಾನಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಕರ್ಣ ಸೀರಿಯಲ್‌ನ ನಟ ಕಿರಣ್ ರಾಜ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟ ಕಿರಣ್​ ರಾಜ್​ ಅವರು ನಿಜ ಜೀವನದಲ್ಲಿ ಇನ್ನೂ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಆಗಿದ್ದಾರೆ​. ಕರ್ಣ ಸೀರಿಯಲ್‌ನಲ್ಲಿ ನಿಧಿ - ನಿತ್ಯಾ ಅವರ ನಡುವೆ ಕರ್ಣನ ಪ್ರೀತಿಗೆ ಪೈಪೋಟಿ ನಡೆದಿದೆ. ಆದರೆ ನಿಜ ಜೀವನದಲ್ಲಿ ಕರ್ಣ ಬೇರೆಯೇ ಸಮಸ್ಯೆಯನ್ನು ಎದುರಿಸುತ್ತಿದ್ದಾರಂತೆ. ಕರ್ಣ ಅಲಿಯಾಸ್ ಕಿರಣ್ ರಾಜ್ ಅವರಿಗೆ ಪ್ರೇಕ್ಷಕರ ಡಿಮ್ಯಾಂಡ್ ಹಾಗೂ ಕೆಲವೊಂದು ಮನವಿಗಳು ತಲೆಬಿಸಿ ತಂದಿದೆ. ಈ ಮಜವಾದ ಅನುಭವವನ್ನು ಕಿರಣ್ ಅವರೇ ಹಂಚಿಕೊಂಡಿದ್ದಾರೆ.

Kiran Raj

ನಟ ಕಿರಣ್ ರಾಜ್ ಅವರು ಕಿರುತೆರೆಯ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ. ಆದರೆ, ಕಿರಣ್ ಅವರು ಬೆಳ್ಳಿತೆರೆಗೂ ಪಾದಾರ್ಪಣೆ ಮಾಡಿದ್ದು, ಕನ್ನಡ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್‌ನಲ್ಲೂ ಕಿರಣ್ ಅವರು ಮಿಂಚಿದ್ದರು. ಇದೀಗ ಅವರ ಜೀವನದ ಕೆಲವೊಂದು ಕುತೂಹಲಕಾರಿ ವಿಷಯಗಳನ್ನು ಕಿರಣ್ ಅವರು kannada_pichharಗೆ ಕೊಟ್ಟಿರುವ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಕಿರಣ್ ಅವರು ತಮ್ಮ ಮದುವೆ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ.

Kiran Raj: ನನ್ನ ಮಗಳನ್ನು ಮದುವೆಯಾಗು ಅಂತಾರೆ: ಕಿರಣ್

ಇನ್ನು ಕಿರಣ್ ಅವರಿಗೆ ಅವರ ಕೆಲವು ಅಭಿಮಾನಿಗಳು ವಿಭಿನ್ನವಾದ ಡಿಮ್ಯಾಂಡ್‌ಗಳನ್ನು ಮಾಡುತ್ತಿದ್ದಾರೆ ಅಂತ ಕಿರಣ್ ರಾಜ್ ಅವರು ಹೇಳಿಕೊಂಡಿದ್ದಾರೆ. ಶೂಟಿಂಗ್‌ ಸೆಟ್‌ಗೆ ಬರುವ ಕೆಲವರು, ನನ್ನನ್ನು ನೋಡಿ ನನ್ನ ಮಗಳನ್ನು ಮದುವೆಯಾಗಿ ಎನ್ನುತ್ತಾರೆ. ನನ್ನ ಬಗ್ಗೆ ಹಿಂದೆ - ಮುಂದೆ ಗೊತ್ತಿರಲ್ಲ. ನಟನಾಗಿದ್ದೇನೆ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಾರೆ. ತಮ್ಮ ಮಗಳಿಗೆ ಮದುವೆ ಮಾಡಿಸಲು ನನ್ನನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಅವರು ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದಾರೆ ಅಂತ ತೋರಿಸುತ್ತೆ. ಇದು ಖುಷಿಯಾಗುತ್ತದೆ ಅಂತ ಕಿರಣ್‌ ರಾಜ್ ಹೇಳಿದ್ದಾರೆ.

ಪ್ರೇಮ ವಿವಾಹವೋ ಇಲ್ಲ ಮನೆಯವರ ಆಯ್ಕೆಯೋ

ಕಿರಣ್ ರಾಜ್ ಅವರು ಪ್ರೇಮ ವಿವಾಹ ಆಗಲಿದ್ದಾರೆಯೋ ಇಲ್ಲ ಮನೆಯವರು ನೋಡಿದ ಹುಡುಗಿಯನ್ನು ಮದುವೆ ಆಗುತ್ತಾರೆಯೋ ಎನ್ನುವ ಬಗ್ಗೆಯೂ ಅವರು ಉತ್ತರಿಸಿದ್ದಾರೆ. ಈ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿರುವ ಕಿರಣ್‌ ರಾಜ್ ಅವರು, ಒಂದು ವಯಸ್ಸಿನವರೆಗೆ ಮನೆಯವರು ಹುಡುಗಿ ನೋಡ್ತೇನೆ ಅಂತ ಹೇಳಿದ್ರು ನಾನು ಬೇಡ.. ಬೇಡ ಎಂದೆ. ಈಗ ಅಪ್ಪ-ಅಮ್ಮ ಆ ವಿಚಾರದಲ್ಲಿ ಕೈಎತ್ತುಬಿಟ್ಟಿದ್ದಾರೆ. ಇವಾಗ ಇರೋ ಆಪ್ಷನ್‌ ಲವ್‌ ಮ್ಯಾರೇಜ್‌ ಮಾತ್ರ ಅಂತ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+