Keralam CM: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಆಯ್ಕೆ, 10 ದಿನ ಸರ್ಕಸ್ ಮಾಡಿದ್ದ ಕಾಂಗ್ರೆಸ್

Kerala New CM: ಕೇರಳಂನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಾಗಿದೆ. ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಮೇ 4ರಂದು ಕೇರಳದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಚುನಾವಣೆ ಫಲಿತಾಂಶ ಪ್ರಕಟವಾಗಿ ಬರೋಬ್ಬರಿ 10 ದಿನದ ನಂತರ ಮುಖ್ಯಮಂತ್ರಿ ಆಯ್ಕೆಯಾಗಿದೆ.

ಕೇರಳಂ ಕಾಂಗ್ರೆಸ್ ನಲ್ಲಿ ಬರೋಬ್ಬರಿ 10 ದಿನಗಳ ಸರ್ಕಸ್ ನ ನಂತರ ಕೇರಳಂನ ಮುಖ್ಯಮಂತ್ರಿ ಆಯ್ಕೆಯಾಗಿದೆ. ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಲಿಸಿದೆ. ಆದರೆ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್ ಹಾಗೂ ವಿ.ಡಿ ಸತೀಶನ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

Kerala New CM

ಅಲ್ಲದೆ ಕೆ.ಸಿ ವೇಣುಗೋಪಾಲ್ ಅವರು ಈ ಬಾರಿಯ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ, ವಿ.ಡಿ ಸತೀಶನ್ ಅವರು ವಿರೋಧ ಪಕ್ಷದ ನಾಯಕರಾಗಿ ಪಿಣರಾಯಿ ವಿಜಯನ್ ಅವರ ಸರ್ಕಾರಕ್ಕೆ ಚಾಟಿ ಬೀಸಿದ್ದರು. ಈ ಕಾರಣಕ್ಕೆ ಕೇರಳಂ ಜನರ ಒಲವು ವಿ.ಡಿ ಸತೀಶನ್ ಅವರ ಪರವಾಗಿತ್ತು. ಆದರೆ ಕೇರಳಂ ಕಾಂಗ್ರೆಸ್ ನ ಶಾಸಕರು ಕೆ.ಸಿ ವೇಣುಗೋಪಾಲ್ ಅವರ ಪರ ಬ್ಯಾಟಿಂಗ್ ಮಾಡಿದ್ದರು.

ಕಳೆದ 10 ದಿನಗಳಿಂದ ಕೇರಳ ರಾಜಕೀಯದಲ್ಲಿ ಭಾರೀ ಚರ್ಚೆ ನಡೆದಿತ್ತು. 10 ದಿನಗಳ ನಂತರ ಕೊನೆಗೂ ಕೇರಳದ ನೂತನ ಮುಖ್ಯಮಂತ್ರಿಯ ಆಯ್ಕೆಯಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತೆ ಅಧಿಕಾರಕ್ಕೆ ಬಂದಿದೆ. ಕೇರಳದಲ್ಲಿ ಈ ಬಾರಿ ಎಲ್‌ಡಿಎಫ್ ಹೀನಾಯ ಸೋಲು ಅನುಣಭವಿಸಿತ್ತು.

ಕೇರಳದಲ್ಲಿ ಎಲ್‌ಡಿಎಫ್‌ನಿಂದ ಪಿಣರಾಯಿ ವಿಜಯ್ ಅವರ ನೇತೃತ್ವದಲ್ಲಿ ಕಳೆದ 10 ವರ್ಷಗಳಿಂದಲೂ ಅಧಿಕಾರದಲ್ಲಿದ್ದರು. ಆದರೆ ಕಳೆದ 5 ವರ್ಷದ ಆಡಳಿತವು ಕೇರಳಿಗರಿಗೆ ಸಮಾಧಾನ ತಂದಿರಲಿಲ್ಲ. ಆದರೆ, ಕೇರಳದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 10 ದಿನವಾದರೂ ಕೇರಳಂನ ಮುಖ್ಯಮಂತ್ರಿ ಆಯ್ಕೆಯಾಗಿರಲಿಲ್ಲ.

ಇದೀಗ ಹೊಸ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಎದುರಾಗಿದ್ದ ಗೊಂದಲ ಪರಿಹಾರವಾಗಿದೆ. ಕಾಂಗ್ರೆಸ್ ಪಕ್ಷದೊಳಗಿನ ಸುದೀರ್ಘ ಚರ್ಚೆಯ ನಂತರ ನೂತನ ಮುಖ್ಯಮಂತ್ರಿಯಾಗಿ ಇದೀಗ ವಿ.ಡಿ. ಸತೀಶನ್ ಅವರ ಹೆಸರು ಅಂತಿಮಗೊಂಡಿದೆ. ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಬಹುಮತ ಪಡೆದ ತಕ್ಷಣವೇ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಪಕ್ಷದೊಳಗೆ ತೀವ್ರ ಚರ್ಚೆ ಪ್ರಾರಂಭವಾಗಿದ್ದವು.

Kerala: ಕೇರಳಂ ಮುಖ್ಯಮಂತ್ರಿ ಮೂರು ಜನರ ನಡುವೆ ಪೈಪೋಟಿ

ಕೇರಳಂನ ನೂತನ ಮುಖ್ಯಮಂತ್ರಿ ಆಯ್ಕೆಯ ವಿಚಾರವಾಗಿ ಮೂವರು ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೇರಳದ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರು ಮುಂಚೂಣಿಯಲ್ಲಿದ್ದರು.

ಇದೀಗ ಅಂತಿಮವಾಗಿ ವಿ.ಡಿ ಸತೀಶನ್​ ಅವರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಒಂದೊಮ್ಮೆ ತಮಗೆ ಕೇರಳದ ಮುಖ್ಯಮಂತ್ರಿ ಹುದ್ದೆ ಕೊಡದೆ ಇದ್ದರೆ ನನಗೆ ಯಾವುದೇ ಸಚಿವ ಸ್ಥಾನ ಬೇಡ, ಕೆ.ಸಿ ವೇಣುಗೋಪಾಲ್ ಅವರು ನಾನು ಸ್ಪರ್ಧೆ ಮಾಡಿರುವ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ವಿ.ಡಿ ಸತೀಶ್‌ ಅವರು ಸವಾಲು ಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+