ರೆಸಾರ್ಟ್ ನಿಂದ ಹೊರಬಂದ ಬಗ್ಗೆ ಸ್ಪಷ್ಟನೆ ಕೊಟ್ಟ ರಾಜಶೇಖರ್ ಪಾಟೀಲ್
ರಾಮನಗರ, ಮೇ 17 : ಬಿಡದಿ ಈಗಲ್ ಟನ್ ರೆಸಾರ್ಟ್ ನಲ್ಲಿ ಇದೀಗ ಹೈಡ್ರಾಮಾವೇ ನಡೆಯುತ್ತಿದೆ. ಗಂಟೆಗಳ ಹಿಂದಷ್ಟೇ ರೆಸಾರ್ಟ್ ನಿಂದ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹೊರ ಬಂದಿದ್ದಾರೆ ಎನ್ನಲಾಗಿತ್ತು.
ಇವರ ಜೊತೆಗೆ ಬೆಳಗಾವಿ ಜಿಲ್ಲೆಯ ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ಹೆಬ್ಬಾಳ್ಕರ್ ಹೊರ ಬಂದಿದ್ದರು ಎಂಬ ಸುದ್ದಿ ಇತ್ತು. ತುರ್ತು ಕೆಲಸದ ನಿಮಿತ್ತ ಅವರು ಹೊರ ನಡೆದಿದ್ದರು ಎಂದು ಹೇಳಿದ್ದರೂ ರೆಸಾರ್ಟ್ ನಿಂದ ಹೊರ ತೆರಳುತ್ತಿದ್ದ ಇವರುಗಳ ಕಾರನ್ನು ಪೊಲೀಸರು ತಡೆದಿದ್ದಾರೆ.
ಪೊಲೀಸರಿಗೆ ಡಿ.ಕೆ.ಸುರೇಶ್ ಕರೆಮಾಡಿ ಕಾರು ತಡೆಯುವಂತೆ ಸೂಚಿಸಿದ್ದರಿಂದ ಸುರೇಶ್ ಸೂಚನೆ ಮೇರೆಗೆ ಗೇಟ್ ಬಳಿ ಪೊಲೀಸರು ಕಾರು ತಡೆದಿದ್ದಾರೆ. ಇದಾಗಿ 10 ನಿಮಿಷಗಳ ನಂತರ ಕೆ.ಜೆ.ಜಾರ್ಜ್, ಪ್ರಿಯಾಂಕಾ ಖರ್ಗೆ ಆಗಮಿಸಿ ರಾಜಶೇಖರ ಪಾಟೀಲ್ ಜತೆ ಮಾತುಕತೆ ನಡೆಸಿದ್ದಾರೆ.

ಇಬ್ಬರೂ ಶಾಸಕರ ಜತೆಗೆ ಮಾತನಾಡಿದ ನಂತರ ರಾಜಶೇಖರ್ ಪಾಟೀಲ್, ನನಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳುತ್ತಿದ್ದೇನೆ. ನನ್ನನ್ನ ಯಾರು ತಡೆದಿಲ್ಲಾ ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications